ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ಸನ್ಮಾನ, ಬೀಳ್ಕೊಡುಗೆ

0
Tribute, farewell to Collector Vaishali M.L
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಸುಬ್ರಮಣ್ಯಂ ರೆಡ್ಡಿ, ರಾಜ್ಯಾಧ್ಯಕ್ಷ ಡಾ. ಎಸ್.ಎಸ್. ರಡ್ಡೇರ ಇವರ ನೇತೃತ್ವದಲ್ಲಿ ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಗೋವಿಂದ ರೆಡ್ಡಿಯವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿಗಳಾಗಿದ್ದ ವೈಶಾಲಿ ಎಂ.ಎಲ್ ವರ್ಗಾವಣೆಗೊಂಡ ಪ್ರಯುಕ್ತ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

Advertisement

ಈ ಸಂದರ್ಭದಲ್ಲಿ ಡಾ. ಎಸ್.ಎಸ್. ರಡ್ಡೇರ ಮಾತನಾಡಿ, ವೈಶಾಲಿ ಎಂ. ಎಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಗದಗ ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸೇವೆಯನ್ನು ಗದಗ ಜನತೆ ಸದಾ ನೆನಪಿಸಿಕೊಳ್ಳುತ್ತದೆ ಎಂದರು.

ಡಾ. ಶಿವಾನಂದಯ್ಯ ಹಿರೇಮಠ, ಡಾ. ಶಿವಕುಮಾರ ಚ.ರಾಮನಕೊಪ್ಪ, ಮಹಾಂತೇಶ ರಡ್ಡೇರ, ಯು.ಆರ್. ಭೂಸನೂರಮಠ, ಸಚಿನ್ ಮಲ್ಲಾಡದ, ಪ್ರಭಾಕರ ಗೋಪಾಲಪ್ಪ ಹೆಬಸೂರ, ಗಿರೀಶ ರೆಡ್ಡೇರ, ರಾಠೋಡ, ಮಹಾದೇವಯ್ಯ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here