ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಪೆಟೈಟ್-2024 ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದು ಭಾರತಕ್ಕೆ ಹೆಮ್ಮೆ ತಂದ ಡಾ.ಶೃತಿ ಹೆಗಡೆಯವರನ್ನು ‘ಶರಣರ ಶಕ್ತಿ’ ಚಿತ್ರತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ನಾಟ್ಯಾಂಜಲಿ ಕೇಂದ್ರದ ವಿದುಷಿ ಸಹನಾ ಭಟ್, ಚೇತನಾ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮಹೇಶ ದ್ಯಾವಪ್ಪನವರ, ಮಂಜುನಾಥಗೌಡ ಪಾಟೀಲ, ಗಿರಿಜಾ ಸಂಗೊಳ್ಳಿ, ಡಾ.ರಮೇಶ, ಝಡ್.ಎಂ. ಮುಲ್ಲಾ, ಅಕ್ಕಮ್ಮ ಹೆಗಡೆ, ಎಂ.ಎಂ. ಕರಿಗೌಡರ, ಡಾ. ವಿ.ಎಂ. ಭಟ್, ವೈಶಾಲಿ ಅಥಣಿ ಮೊದಲಾದವರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ತಂದೆ ಡಾ.ಕೃಷ್ಣ ಎಂ.ಹೆಗಡೆ, ತಾಯಿ ಕಮಲಾ ಹೆಗಡೆ ಉಪಸ್ಥಿತರಿದ್ದರು.
ಎಂ.ಬಿ.ಬಿ.ಎಸ್ ಮುಗಿಸಿ, ಎಂ.ಡಿ ಮಾಡುತ್ತಿರುವ ಡಾ.ಶೃತಿ ಅವರನ್ನು ಈ ಸಂದರ್ಭದಲ್ಲಿ ‘ಶರಣರ ಶಕ್ತಿ’ ಚಲನಚಿತ್ರದಲ್ಲಿ ಬಸವಣ್ಣನವರ ಪಾತ್ರ ನಿರ್ವಹಿಸಿದ ಮಂಜುನಾಥ ಗೌಡ ಪಾಟೀಲ್, ನಗೇಮಾರಿ ತಂದೆ ಪಾತ್ರ ಮಾಡಿದ ವಿನೋದ ದಂಡಿನ್, ಚಲನಚಿತ್ರದ ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಮತ್ತು ಪ್ರಶಾಂತ ಚಿತ್ರ ತಂಡದ ಸದಸ್ಯರು ಸನ್ಮಾನಿಸಿ ಶುಭ ಕೋರಿದರು.