ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕಲಾವಿದರ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಹಿತರಕ್ಷಣಾ ವೇದಿಕೆಯ ವತಿಯಿಂದ ಸೋಮವಾರ ನಿಧನರಾದ ಉತ್ತರ ಕರ್ನಾಟಕದ ಹಿರಿಯ ರಂಗಕಲಾವಿದರಾದ ಡಾ. ರಾಜು ತಾಳಿಕೋಟಿ ಹಾಗೂ ರಂಗಕಲಾವಿದರಾದ ಡಾ. ಯಶವಂತ ಸರದೇಶಪಾಂಡೆ, ಪ್ರೊ. ಆರ್.ಎನ್. ಕುಲಕರ್ಣಿ, ಪ್ರೊ. ಎಂ.ಎಸ್. ಕುಲಕರ್ಣಿ, ಕರಮುಡಿ ಖಾಜಾಸಾಬ, ಜಾನಪದ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದ್ಯಾಮಲಪ್ಪ ಲಮಾಣಿ ಹಾಗೂ ಡಿ. ಹನಮಕ್ಕ ಅವರಿಗೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಶಂಕ್ರಣ್ಣ ಸಂಕಣ್ಣವರ ವಹಿಸಿದ್ದರು. ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ.ಬಿ. ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಬಿ.ಬಿ. ಬಣ್ಣದ, ವೀರೇಶ ಕಿತ್ತೂರ, ಕಲ್ಲಿನಾಥಶಾಸ್ತ್ರಿ ಅಡ್ನೂರ, ಅಂದಾನೆಪ್ಪ ವಿಭೂತಿ, ಐ.ಕೆ. ಕಮ್ಮಾರ, ವಿಜಯಕುಮಾರ ಜಿತೂರಿ, ವಿರೂಪಾಕ್ಷಪ್ಪ ಕ್ಷತ್ರಿಯ, ಬಸವರಾಜ ನಿ.ಹೂಗಾರ, ಸೋಮಶೇಖರ ಚಿಕ್ಕಮಠ, ಶಿವು ಭಜಂತ್ರಿ, ಬಸವರಾಜ ಈರಣ್ಣವರ, ಜಿ.ವಿ. ಬೊಮ್ಮಪ್ಪನವರ, ಬಸವರಾಜ ಹಡಗಲಿ, ಡಾ. ಗೋವಿಂದಪ್ಪ ವೇಶಧಾರಿ, ಅಶೋಕ ಬಡಿಗೇರ, ಸುಭಾಷ ಮಳಗಿ, ಎಂ.ಎಸ್. ಮಾದರ, ಎಂ.ಬಿ. ಹವಾಲ್ದಾರ, ದೇವು ಲಮಾಣಿ, ರಂಗಪ್ಪ ಹುಯಿಲಗೋಳ, ಜ್ಯೋತಿಶ್ರೀ ಎಂ.ಎಲ್, ಪ್ರಕಾಶ ಕುರುಬರ, ಪಾರ್ವತಿ ಕುರುಬರ, ಡಾ. ಪ್ರಭು ಗಂಜಿಹಾಳ, ನಿಂಗಪ್ಪ ಗುಡ್ಡದ, ಚಿದಾನಂದ ಅನವಾಳ ಸೇರಿದಂತೆ ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದರು. ಹವ್ಯಾಸಿ ರಂಗಕರ್ಮಿ ಮೌನೇಶ ಸಿ.ಬಡಿಗೇರ (ನರೇಗಲ್ಲ) ಕಾರ್ಯಕ್ರಮ ನಿರೂಪಿಸಿ ವಂದಿಸಿದರು.