ಚಂದನ ಸ್ಕೂಲ್‌ನಲ್ಲಿ ಡಾ.ಸಿಂಗ್‌ ರಿಗೆ ಶೃದ್ಧಾಂಜಲಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದಲ್ಲಿ ಭಾರತರತ್ನ, ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ಅವರ ನಿಧನಕ್ಕೆ ಶುಕ್ರವಾರ ಶೃದ್ಧಾಂಜಲಿ ಅರ್ಪಿಸಲಾಯಿತು.

Advertisement

ಸಂಸ್ಥೆಯ ನಿರ್ದೇಶಕ ಎಚ್.ಸಿ. ರಟಗೇರಿ ಮಾತನಾಡಿ, ಚಂದನ ಶಾಲೆಯ ಬಗ್ಗೆ ತಿಳಿದುಕೊಂಡಿದ್ದ ಮನಮೋಹನ್ ಸಿಂಗ್ ಅವರನ್ನು ಪ್ರೊ. ಸಿಎನ್‌ಆರ್ ರಾವ್ ವಿಜ್ಞಾನ ಕೆಂದ್ರ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಅವರು ಸಹಬರುವ ಆಸೆ ವ್ಯಕ್ತಪಡಿಸಿದದ್ದರು. ಆದರೆ ಅವರ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ವೈದ್ಯರು ಪ್ರವಾಸ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಡಾ.ಸಿಂಗ್ ಅವರು ಸಂಸ್ಥೆಯ ಸಂಸ್ಥಾಪಕರಿಗೆ ಪತ್ರ ಬರೆದು ಶುಭಾಶಚಿiÀÄ ಕೋರಿದ್ದರು.

ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲಿಗರಾಗಿದ್ದರು. ಭಾರತದಲ್ಲಿ ಅವರು ಪಧಾನಿಯಾಗಿದ್ದ ವೇಳೆಯಲ್ಲಿ ತಂದ ಹತ್ತು ಹಲವಾರು ಬದಲಾವಣೆಗಳಿಂದ ಭಾರತ ಮುಂಚೂಣಿಯಲ್ಲಿ ನಿಲ್ಲುವಂತಾಗಿತ್ತು. ಇಂತಹ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಿರುವದು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಸಂತಾಪ ಸೂಚಿಸಿದ್ದು, ಸ್ಕೂಲ್ ಚಂದನದಲ್ಲಿ ವಿದ್ಯಾರ್ಥಿಗಳು, ನೀರ್ದೇಶಕರು, ಪ್ರಾಂಶುಪಾಲರು ಮತ್ತು ಶಿಕ್ಷಕರು ಸೇರಿ ಶೃದ್ಧಾಂಜಲಿ ಅರ್ಪಿಸಿದರು.

 


Spread the love

LEAVE A REPLY

Please enter your comment!
Please enter your name here