ಗದಗ: ಮುಸ್ಲಿಂ ಸಮುದಾಯದ ಪವಿತ್ರ ಶೃದ್ಧಾಕೇಂದ್ರವಾಗಿರುವ ಮಕ್ಕಾ ಮದೀನ ಪುಣ್ಯ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಶಿರಹಟ್ಟಿಯಿಂದ ಪಾದಯಾತ್ರೆ ಕೈಗೊಂಡ ಶಿರಹಟ್ಟಿ ಪಟ್ಟಣದ ನಿವಾಸಿ ಫಜಲ್‌ಶೇಖ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕವು ಸನ್ಮಾನಿಸಿ ಗೌರವಿಸಿತು. ಸುಮಾರು 10 ಸಾವಿರ ಕಿ.ಮೀ ದೂರವನ್ನು 6 ತಿಂಗಳೊಳಗೆ ಪೂರ್ಣಗೊಳಿಸಿದ ಈ ಯಾತ್ರಿಕನಿಗೆ ಗದುಗಿನ ಕನಕ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಾಗರಿಕ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಧರ್ಮ ಗುರುಗಳ, ಅತಿಥಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
Advertisement