ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಮಂಜುನಾಥ ನಗರದ ಕಣವಿ ಫ್ಲಾಟ್‌ನ ಮಾಧವಿ ಧಾರವಾಡಕರ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿಮಿತ್ತ ಶೀತಲಾಮಾತಾ ಪೂಜಾ/ಸೇವಾ ಟ್ರಸ್ಟ್ ಮತ್ತು ಶ್ರೀ ಹನುಮಂತ್ ಸಿಂಗ್ ಜಮಾದಾರ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
Advertisement
ಪ್ರಥಮ ಪ್ರಯತ್ನದಲ್ಲಿಯೇ ಮಾಧವಿ ಧಾರವಾಡಕರ ಸಿಎ ಪರೀಕ್ಷೆ ಉತ್ತೀರ್ಣರಾಗಿರುವುದು ಹೆಮ್ಮೆಯ ವಿಷಯ. ಮಾಧವಿಯವರು ತಮ್ಮ ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚು ಪ್ರಗತಿ ಹೊಂದಲೆಂದು ಟ್ರಸ್ಟ್ ಅಧ್ಯಕ್ಷ ಎಸ್.ಎ. ಜಮಾದಾರ್ ಹಾರೈಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ನಾರಪ್ಪನವರ್, ಅಮೃತ ಧಾರವಾಡಕರ್, ವಜ್ರಬಾಯಿ ಜಮಾದಾರ್, ಪುಷ್ಪಾ ವರ್ಣೇಕರ್, ಲಕ್ಷ್ಮೀ ಕೌಟೇಕರ್, ವೀಣಾ ಧಾರವಾಡಕರ್, ಸುಭದ್ರ ಧಾರವಾಡಕರ್, ಗಂಗೂಬಾಯಿ, ಸುಜಾತ ಕಾಟೆವಾಲ ಮುಂತಾದವರಿದ್ದರು.