ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರಿಗೆ ಮುಳಗುಂದ ಆಯುಷ್ ವೈದ್ಯರ ಸಂಘದಿಂದ ಸನ್ಮಾನಿಸಲಾಯಿತು. ಹಿರಿಯ ವೈದ್ಯರಾದ ಡಾ. ಪಿ.ಎಸ್. ಜಕ್ಕನಗೌಡ್ರ ಮಾತನಾಡಿ, ನಿಮ್ಮ ಸೇವೆ ಕೇವಲ ಒಂದು ಸಮುದಾಯಕ್ಕೆ ಮೀಸಲಾಗದೇ ಸರ್ವ ಸಮಾಜಕ್ಕೂ ನೀಡಬೇಕು. ಕುಂಠಿತವಾಗಿ ಉಳಿದ ಸಮುದಾಯದ ಅಭಿವೃದ್ಧಿ ಕೆಲಸಗಳು ನಿಮ್ಮಿಂದಾಗಲಿ ಎಂದು ಸಲಹೆ ನೀಡಿ ನೂತನ ಸದಸ್ಯರನ್ನು ಸನ್ಮಾನಿಸಿದರು.
Advertisement
ಈ ಸಂದರ್ಭದಲ್ಲಿ ಎಂ.ಎ. ಖಾಜಿ, ತಾಜುದ್ದೀನ ಕಿಂಡ್ರಿ, ಹಮೀದ ಮುಜಾವರ, ಹೈದರ ಖವಾಸ, ಮುನ್ನಾ ಢಾಲಾಯತ್, ದಾವಲಸಾಬ ಲಕ್ಷ್ಮೇಶ್ವರ, ರಫೀಕ್ ದಲೀಲ, ಲಾಲಷಾಪೀರ ಮಕಾಂದಾರ, ಅಲ್ಲಾಭಕ್ಷಿ ಹೊಂಬಳ, ದಾವೂದ್ ಜಮಾಲ್ ಸನ್ಮಾನ ಸ್ವೀಕರಿಸಿದರು. ವೈದ್ಯರಾದ ಡಾ. ಎಸ್.ಕೆ. ಮಟ್ಟಿ, ಡಾ. ಸಂಜೀವರಡ್ಡಿ, ಡಾ. ಬದಾಮಿ ಶುಭ ಕೋರಿದರು. ಖಲಂದರ ಗಾಡಿ, ರಫೀಕ್ ಸದರಬಾವಿ, ಅಬ್ದುಲಸಾಬ ಹಳೆಮಸೂತಿ ಮುಂತಾದವರಿದ್ದರು.