ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಕಳಸಾಪೂರ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಇತ್ತೀಚೆಗೆ ಮಣಕವಾಡ ಶ್ರೀ ಸಿದ್ದರಾಮ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಗೊಂಡ ಡಾ. ಬಸವರಾಜ ಬಳ್ಳಾರಿ ಬಳಗದ ಅಮ್ಮ ಪೌಂಡೇಶನ್‌ನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಎಲ್.ಗುಂಜೀಕರರನ್ನು ಸನ್ಮಾನಿಸಲಾಯಿತು.
Advertisement
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಾಯ್.ಎನ್. ಗೌಡರ, ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಪ್ರೇಮನಾಥ ಗರಗ, ರುದ್ರಗೌಡ ಪಾಟೀಲ್, ಪತ್ರಕರ್ತ ಎಚ್.ಎಮ್. ಶರೀಫನವರ, ಗದಗ ಓಬಿಸಿ ತಾಲೂಕು ಅದಿಕಾರಿಗಳಾದ ಡಾ. ಬಸವರಾಜ ಬಳ್ಳಾರಿ, ವಿಜಯ ಹಿರೇಮಠ, ತಿಮ್ಮರೆಡ್ಡಿ ಮರಡ್ಡಿ ಸೇರಿದಂತೆ ಹಲವರಿದ್ದರು.