ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಗೌರಿಗುಡಿ ಓಣಿಯ ವೀರಶೈವ ಸಮಾಜದ ಉಪಾಧ್ಯಕ್ಷ ಶರಣಬಸಪ್ಪ (ರಾಜು) ಗುಡಿಮನಿ ಅವರು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಮಿತ್ತ ಗೌರಿಗುಡಿ ಓಣಿಯ ವೀರಶೈವ ಸಮಾಜದ ಅಧ್ಯಕ್ಷ ಕಾಶಣ್ಣ ಕುಂದಗೋಳ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
Advertisement
ಸಭೆಯಲ್ಲಿ ನಿರ್ದೇಶಕರಾದ ಶಿವಪುತ್ರಪ್ಪ ಬೆಂತೂರ, ಮರಿಯಪ್ಪ ಅವರಾಧಿ, ಶಿವಾನಂದ ನಾಗರಾಳ, ಬಸವರಾಜ ಕುಂದಗೋಳ, ಶರಣಪ್ಪ ಅಣ್ಣಿಗೇರಿ, ಸತೀಶ ಕುಂದಗೋಳ, ಉಮೇಶ ಅರಮನಿ, ಸುಭಾಷ ಮಳಗಿ, ಅಜಯ ಕುಂದಗೋಳ, ಸಿದ್ದು ಕುಂದಗೋಳ ಉಪಸ್ಥಿತರಿದ್ದರು ಎಂದು ವೀರಶೈವ ಸಮಾಜದ ಕಾರ್ಯದರ್ಶಿ ಸಿದ್ದಲಿಂಗೇಶ್ವರ ಮುಳ್ಳಾಳ ತಿಳಿಸಿದ್ದಾರೆ.