ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇಲ್ಲಿನ ಗೋಪನಕೊಪ್ಪದ ಶಾಂತವೀರ ಲೇಔಟ್‌ನಲ್ಲಿ ಉತ್ತಮ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಕ್ಕಾಗಿ ವಾರ್ಡ್ ನಂ. 28ರ ಕಾರ್ಪೋರೇಟರ್ ಶಿವಕುಮಾರ ಪಾಟೀಲರನ್ನು ಬಡಾವಣೆಯ ನಿವಾಸಿಗಳ ಸಂಘದ ಪರವಾಗಿ ಅಭಿನಂದಿಸಲಾಯಿತು.
Advertisement
ಸಂಘದ ಅಧ್ಯಕ್ಷ ಆನಂದ ಹೆಚ್.ವಾಯ್ ಅವರ ಮನೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿದ್ದಕ್ಕಾಗಿ ಗುತ್ತಿದಾರ ಸಂಗಮೇಶ ಅವರನ್ನೂ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಜೀವಕುಮಾರ ಭೂಶೆಟ್ಟಿ, ಮೃತ್ಯುಂಜಯ್ ಶೆಟ್ಟರ್, ಬಸವರಾಜ್ ಶೆಟ್ಟರ್, ವಿಕ್ರಮ್ ವೆರ್ಣೇಕರ್, ಆರ್.ಕೆ. ಹೊಸಮನಿ, ದೀಪಕ್ ಪುರಾಣಿಕ್, ಗುಡ್ಡಪ್ಪ ಭೂಶೆಟ್ಟಿ, ಅಶೋಕ ಬಣಗಾರ್, ರಮೇಶ ಪಾಟೀಲ, ಸುನೀಲ್ ಜೀವನಗೌಡ್ರ, ಸಿದ್ದೇಶ ಅಂಗಡಿ, ರಘು ಸಂಗಮಿ, ಶಿವನಗೌಡ್ರ ಪಾಟೀಲ, ರಾಜು ಭೂಶೆಟ್ಟಿ ಹಾಗೂ ಶಾಂತವೀರ ಲೇಔಟ್ ನಿವಾಸಿಗಳು ಉಪಸ್ಥಿತರಿದ್ದರು.