ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ವತಿಯಿಂದ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎಂ.ಪಿ. ಮುಳಗುಂದ ಮಾತನಾಡಿ, ದೇಶಕ್ಕಾಗಿ ವೀರ ಮರಣ ಹೊಂದಿದ ಯೋಧರ ಬಲಿದಾನದಿಂದ ನಾವೆಲ್ಲ ಈಗ ಸುರಕ್ಷಿತವಾಗಿದ್ದೇವೆ. ಅವರ ಬಲಿದಾನವನ್ನು ಸದಾ ಸ್ಮರಿಸಬೇಕೆಂದು ಹೇಳಿ ಎರಡು ನಿಮಿಷ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಸಿರಾಜ್ ಲಕ್ಕುಂಡಿ ಮಾತನಾಡಿ, ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತದ ಸೈನಿಕರು ಸೂಕ್ತ ಪ್ರತ್ಯುತ್ತರ ನೀಡಿ ಅಲ್ಲಿನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.

ಸಂಘದ ಗದಗ ತಾಲೂಕಾ ಸಹ ಕಾರ್ಯದರ್ಶಿ ಶಂಭುಲಿAಗೇಶ ಎಸ್.ಗಾಣಿಗೇರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಟಿ.ಮುಧೋಳ, ರೇಖಾ ಹುಲ್ಲೂರ, ಮಂಜು ಡೋಣಿ, ಪ್ರಶಾಂತ ಕಟ್ಟಿಮನಿ, ಎಲ್.ಡಿ. ಮೂಲಿಮನಿ, ವೆಂಕಟೇಶ ಜುನಜಮಕಿ, ಕರವೇ ಮುಖಂಡರಾದ ಆಶಾ ಜೂಲಗುಡ್ಡ, ನಿಂಗನಗೌಡ ಮಾಲೀಮಾಟೀಲ, ಹರ್ಲಾಪೂರ ಗ್ರಾಮದ ಯುವ ಘಟಕ ಹಾಗೂ ಹರ್ಲಾಪುರ ಗ್ರಾಮದ ಸದಸ್ಯರು, ಅಸುಂಡಿ ಗ್ರಾಮ ಘಟಕದ ಸದಸ್ಯರು, ಅಟೋ ಸಂಘದ ಸಂತೋಷ, ಸರ್ಫರಾಜ, ಕಿರಣ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here