ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ನೂತನ ಪೌರಾಯುಕ್ತರಾಗಿ ಆಗಮಿಸಿದ ಮಹೇಶ ಪೋತೆದಾರ ಅವರಿಗೆ ನಗರಸಭೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ ಹುಣಸೀಮರದ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ ಹುಣಸೀಮರದ ಮಾತನಾಡಿ, ಗುತ್ತಿಗೆದಾರರ ಹಲವಾರು ಸಮಸ್ಯೆಗಳನ್ನು ವಿವರಿಸಿ, ಹಂತ ಹಂತವಾಗಿ ಗುತ್ತಿಗೆದಾರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಾರ್ಯನಿರ್ವಾಹಕ ಅಭಿಯಂತರ ಎಚ್.ಎ. ಬಂಡಿವಡ್ಡರ, ಗುತ್ತಿಗೆದಾರರಾದ ಎಂ.ಸಿ. ಶೇಖ, ಜಿ.ಎಸ್. ಹಿರೇಮಠ, ಎಸ್.ಎಚ್. ಹೂಲಿ, ಎ.ಬಿ. ಕಟಗಿ, ಬಿ.ಪಿ. ಕಲ್ಮನಿ, ಆರ್.ಎಮ್. ತಡಹಾಳ, ದತ್ತು ಗಾಯಕವಾಡ, ಎಮ್.ಎಸ್. ಮುಳಗುಂದ, ಬಿ.ಎಮ್. ಗುಡಸಾಲಿ, ಎಸ್.ಎಮ್. ಚಳಗೇರಿ, ಪಿ.ಎಮ್. ಗುಂತಕಲ್, ಮಂಜುನಾಥ ಬೆಳಧಡಿ, ಎಲ್.ಬಿ. ದೊಡ್ಡಮನಿ, ಎಸ್.ಎಸ್. ಮುಳಗುಂದ, ಎಸ್.ವಿ. ಜಾಲಿಹಾಳ, ಶರಣಪ್ಪ ಚಳಗೇರಿ, ಪಿ.ಐ. ಪಿಂಡಕೊರ, ಎಮ್.ಎಚ್. ತೋರಗಲ್, ಕೆ.ಎಮ್. ಬಳ್ಳಾರಿ, ಬಸವರಾಜ ಉಮಚಗಿ ಮುಂತಾದವರು ಉಪಸ್ಥಿತರಿದ್ದರು.