ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಗದಗ ಜಿಲ್ಲೆಗೆ ಮುಖ್ಯ ಪಶುವೈದ್ಯಾಧಿಕಾರಿಯಾಗಿ ಆಗಮಿಸಿದ ಡಾ. ಉಮೇಶ ಹನಮರೆಡ್ಡಿ ತಿರ್ಲಾಪೂರ, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಎಚ್.ವೈ. ಹೊನ್ನಿನಾಯ್ಕರ ಹಾಗೂ ಗದಗಿನಲ್ಲಿ ಸೇವೆ ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಪಶು ಆಸ್ಪತ್ರೆಗೆ ಮುಖ್ಯ ಪಶುವೈದ್ಯಾಧಿಕಾರಿ ಪದೋನ್ನತಿ ಹೊಂದಿದ ಡಾ. ಆರ್.ಎಮ್. ನಾಯ್ಕರ ಅವರುಗಳಿಗೆ ಹಾಲುಮತ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.
Advertisement
ಈ ಸಂದರ್ಭದಲ್ಲಿ ಹಾಲಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾ ಪದಾಧಿಕಾರಿಗಳಾದ ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ರಾಘು ವಗ್ಗನವರ, ಮುತ್ತು ಜಡಿ, ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಣ್ಣವರ, ಹರ್ಷಿತಾ ಇಮರಾಪೂರ ಮುಂತಾದವರು ಉಪಸ್ಥಿತರಿದ್ದರು.