HomeGadag Newsಐಎಎಸ್ ಅಧಿಕಾರಿ ಬೀಳಗಿ ನಿಧನಕ್ಕೆ ಶ್ರದ್ಧಾಂಜಲಿ

ಐಎಎಸ್ ಅಧಿಕಾರಿ ಬೀಳಗಿ ನಿಧನಕ್ಕೆ ಶ್ರದ್ಧಾಂಜಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ನಿಧನಕ್ಕೆ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಗಜೇಂದ್ರಗಡ-ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು ತೀವ್ರ ನೋವುಂಟುಮಾಡಿದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಹಾಂತೇಶ ಬೀಳಗಿ ಅವರು ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ದಕ್ಷತೆಯ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವನ್ನು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇವೆ ಎಂದರು.

ಈ ವೇಳೆ ಶರಣಪ್ಪ ರೇವಡಿ, ಬಸವರಾಜ ಬೇಲೇರಿ, ನಾಗಣ್ಣ ಲಕ್ಕಲಕಟ್ಟಿ, ಬಿ.ಎಸ್. ಬಸನಗೌಡರ, ಸಾಗರ ವಾಲಿ, ಮುತ್ತಣ್ಣ ಗುಗ್ಗರಿ, ಬಸವರಾಜ ಹೂಗಾರ, ಮಹೇಶ ಪಲ್ಲೇದ, ಮಲ್ಲಿಕಾರ್ಜುನ ಕೊಟಗಿ, ಮಲ್ಲಿಕಾರ್ಜುನ ಹಡಪದ, ಕಳಕಯ್ಯ ಸಾಲಿಮಠ ಸೇರಿ ಇತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!