
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜನ್ಮದಿನದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮ ಅನನ್ಯ ಮತ್ತು ಅರ್ಥ ಪೂರ್ಣವಾದುದು ಎಂದು ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.
ಪಟ್ಟಣದ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಮುಖಂಡ ಅಲ್ಲಾಭಕ್ಷ ನದಾಫ್ ಅವರ ಜನ್ಮ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೃಷ್ಟಿಕರ್ತನ ಸನ್ನಿಧಿಯಲ್ಲಿ ಹುಟ್ಟು ಆಕಸ್ಮಿಕ, ಸಾವು ಖಚಿತ. ಅದನ್ನು ಮೀರಲು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷವೆನಿಸಿದೆ. ಈ ಕಾರ್ಯ ಬೇರೆಯವರಿಗೆ ಮಾದರಿಯಾಗಿದೆ. ಅಲ್ಲಾಭಕ್ಷ ಅವರ ಜನ್ಮ ದಿನದವನ್ನು ಸಾರ್ಥಕಗೊಳಿಸಿಕೊಳ್ಳಲು ತನ್ನ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸದೆ ಮತ್ತೊಬ್ಬರನ್ನು ಸನ್ಮಾನಿಸುವ ಮೂಲಕ ಸಮಾಜ ಸೇವೆಗೆ ಎತ್ತಿದ ಕೈಯೆಂದು ಸಾಬೀತುಪಡಿಸಿರುವುದು ಸಂತಸ ತಂದಿದೆ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಡಾ. ಕೆ.ಬಿ. ಧನ್ನೂರ, ಎಂ.ಎಸ್. ಧಡೇಸೂರಮಠ, ಸಿ.ವಿ. ವಂಕಲಕುಂಟಿ, ಶರಣಪ್ಪ ಬೆಟಗೇರಿ, ಶಿವನಗೌಡ ಪಾಟೀಲ, ರಾಚಯ್ಯ ಮಾಲಗಿತ್ತಿಮಠ, ವಿ.ಎನ್. ಪಾಟೀಲ, ಅಲ್ಲಾಭಕ್ಷ ನದಾಫ್, ಮೈಲಾರಪ್ಪ ಚಳ್ಳಮರದ, ಶಿವು ಕೊಪ್ಪದ, ನಿಂಗನಗೌಡ ಲಕ್ಕನಗೌಡ್ರ, ಹನಮಂತ ದ್ವಾಸಲ್, ಬಸವರಾಜ ಹತ್ತಿಕಟಿಗಿ ಸೇರಿದಂತೆ ಕಿವುಡ ಮಕ್ಕಳ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.