ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್ ನಡೆದಿದ್ದು, ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ಪತಿಯಿಂದಲೇ ಪತ್ನಿ ಹಾಗೂ ಇಬ್ಬರು ಮಕ್ಕಳ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.
38 ವರ್ಷದ ಪತ್ನಿ ಭಾಗ್ಯ, 19 ವರ್ಷದ ನವ್ಯ, 22 ವರ್ಷದ ಹೇಮಾವತಿ ಮೃತರು. ಪತ್ನಿ ಹಾಗೂ ಮಕ್ಕಳನ್ನು ಬರ್ಬರ ಹತ್ಯೆಗೈದು ಹೋಂ ಗಾರ್ಡ್ ಆಗಿರುವ ಪತಿ ಗಂಗರಾಜು ಪರಾರಿಯಾಗಿದ್ದ. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೀಣ್ಯ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಆರೋಪಿ ಗಂಗರಾಜು ನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಮಾತನಾಡಿದ್ದು, ಇಂದು ಸಂಜೆ 5 ಗಂಟೆಗೆ 112 ಮುಖಾಂತರ ಮಾಹಿತಿ ಬಂತು. ಸ್ಥಳಕ್ಕೆ ಹೊಯ್ಸಳ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಮೂರು ಹೆಂಗಸರ ಕೊಲೆ ನಡೆದಿರುವುದು ಪತ್ತೆಯಾಗಿದೆ. ಮಹಿಳೆ ಭಾಗ್ಯ, ಆಕೆಯ ಮಗಳು ನವ್ಯ, ಸಂಬಂಧಿ ಹೇಮಾವತಿ ಎಂಬುವವರ ಕೊಲೆಯಾಗಿದೆ.
ಒಂದೇ ಕೊಣೆಯಲ್ಲಿ ಕೊಲೆ ಮಾಡಲಾಗಿದೆ. ಗಂಗರಾಜು ಎಂಬಾತನಿಂದ ಕೊಲೆ ನಡೆದಿದೆ. ಗಂಗರಾಜು ಕೊಲೆಯಾದ ಭಾಗ್ಯ ಗಂಡ. ಹೆಬ್ಬುಗೋಡಿಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತಿದ್ದಾನೆ. ಕೊಲೆ ಮಾಡಿದ ಬಳಿಕ ವೆಪನ್ ಸಮೇತ ಆತನೇ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲತಃ ಇವರು ನೆಲಮಂಗಲದವರು. ಕಳೆದ ಆರು ವರ್ಷದಿಂದ ಬಾಡಿಗೆ ಮನೆಯಲ್ಲಿ ಇಲ್ಲಿ ವಾಸವಾಗಿದ್ದರು. ಯಾಕೆ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ಮಾಡಲಾಗುತ್ತೆ. ನಂತರದಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.