ನೆಲಮಂಗಲ: ನಗರದ ಮುಕ್ತನಾಥೇಶ್ವರ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಜರುಗಿದೆ.
Advertisement
ಜನರ ಗುಂಪು ಪೋಲಿಸರ ಸಮ್ಮುಖದಲ್ಲೇ ಥಳಿಸಿದೆ. ಏಕಾಏಕಿ ವ್ಯಕ್ತಿಯ ಮೇಲೆ ಮೂರು ನಾಲ್ಕು ಜನರಿಂದ ಹಲ್ಲೆ ಆರೋಪ ಮಾಡಲಾಗಿದ್ದು, ಪೊಲೀಸರು ಇದ್ದ ವೇಳೆ ಅಟ್ಟಾಡಿಸಿ ರಿಯಲ್ ಎಸ್ಟೇಟ್ ಪಟಾಲಮ್ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಷ್ಟು ಜನರು ಏಕೆ ನಿಂತಿದ್ದೀರಾ ಎಂದು ಕೇಳಿದಕ್ಕೆ ಗುಂಪು ಹಲ್ಲೆ ಮಾಡಿದೆ. ಕೆ ಆರ್ ಎಸ್ ಪಾರ್ಟಿಯ ಯಲಚಗೆರೆ ಕುಮಾರ್ ಮೇಲೆ ಹಲ್ಲೆ ಮಾಡಿದೆ.
ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.