ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಜಿದ್ದಾಜಿದ್ದಿ ಜೋರಾಗಿದೆ. 12ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲಿ ಐಶ್ವರ್ಯ ಹಾಗೂ ತ್ರಿವಿಕ್ರಮ್ ಡೇಂಜರ್ ಝೋನ್ ತಲುಪಿದ್ದರು. ಕೊನೆಗೆ ತ್ರಿವಿಕ್ರಮ್ ಅವರೇ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿ, ಆಚೆ ಸಹ ಹೋಗಿದ್ದರು.
ಇದೀಗ ತ್ರಿವಿಕ್ರಮ್ ವಾಪಸ್ ಬಂದಿದ್ದಾರೆ. ಅವರನ್ನು ಎಲಿಮಿನೇಟ್ ಅಂತ ಹೊರಗೆ ಕಳಿಸಿ ಮತ್ತೆ ಒಳಗೆ ಕರೆದುಕೊಂಡಿದ್ದು ಯಾಕೆ ಎಂಬುದನ್ನು ಕೂಡ ಸುದೀಪ್ ವಿವರಿಸಿದರು. ‘ತ್ರಿವಿಕ್ರಮ್ಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ವಿ. ಈ ವಾರ ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ’ ಎಂದು ಸುದೀಪ್ ಹೇಳಿದರು.
ದೊಡ್ಮನೆಯಲ್ಲಿ ತ್ರಿವಿಕ್ರಮ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದು ನಿಜ. ಆದರೆ ಅವರಿಗೆ ಓವರ್ ಕಾನ್ಫಿಡೆನ್ಸ್ ಕೂಡ ಇದೆ. ಅದೇ ಕಾರಣಕ್ಕೆ ಅವರು ತಮ್ಮನ್ನು ತಾವು ನಾಮಿನೇಟ್ ಮಾಡಿಕೊಂಡಿದ್ದರು. ‘ಸೇವ್ ಆಗುತ್ತೇನೆ ಎಂಬ ಕಾನ್ಫಿಡೆನ್ಸ್ ನಿಮಗೆ ಇದೆಯಾ’ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಈಗ ಅವರು ಮತ್ತೆ ವಾಪಸ್ ಬಂದಿದ್ದಾರೆ. ಅವರ ಆಟ ಹೇಗಿರಲಿದೆ ಎಂಬುದನ್ನು ನೋಡಬೇಕಿದೆ.