ವಾಷಿಂಗ್ಟನ್:- ಅಮೆರಿಕದ ಸುಂಕ ಸಮರ ಮುಂದುವರಿದಿದ್ದು, ಭಾರತೀಯ ಔಷಧಿಗಳ ಮೇಲೆ ಶೇ. 100 ರಷ್ಟು ಸುಂಕ ವಿಧಿಸಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರದಿಂದ ಭಾರತ ಈಗಾಗಲೇ ಸಂಕಷ್ಟಕ್ಕೀಡಾಗಿದೆ. ಈಗ ಟ್ರಂಪ್ ಅವರ ಮತ್ತೊಂದು ಘೋಷಣೆ ಭಾರತದ ಫಾರ್ಮಾ ಕಂಪನಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಲಿದೆ. ದೇಶಕ್ಕೆ ವಿದೇಶಗಳಿಂದ ಆಮದಾಗುತ್ತಿರುವ ಔಷಧಿಗಳಿಗೆ ಶೇಕಡಾ 100 ತೆರಿಗೆ ವಿಧಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದಾರೆ. ಇದರಿಂದ ಅಮೆರಿಕ ಮಾರುಕಟ್ಟೆಯನ್ನೇ ಹೆಚ್ಚು ಅವಲಂಬಿಸಿರುವ ಭಾರತದ ಫಾರ್ಮಾ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ನಿರ್ಮಿಸುವ ಫಾರ್ಮಸ್ಯೂಟಿಕಲ್ ಕಂಪನಿಗಳನ್ನು ಹೊರತುಪಡಿಸಿದ ಭಾರತದ ಎಲ್ಲ ಬ್ರಾಂಡೆಡ್ ಮತ್ತು ಪೇಟೆಂಟ್ ಹೊಂದಿದ ಫಾರ್ಮಸ್ಯೂಟಿಕಲ್ ಉತ್ಪನ್ನಗಳ ಮೇಲೆ ಅಕ್ಟೋಬರ್ 1, 2025ರಿಂದ ಜಾರಿಯಾಗುವಂತೆ ಶೇಕಡ 100ರಷ್ಟು ಸುಂಕ ವಿಧಿಸಲಾಗುತ್ತದೆ” ಎಂದು ಟ್ರಂಪ್ ಟ್ರುಥ್ ಸೋಶಿಯಲ್ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ಉತ್ಪದನಾ ಘಟಕ ಹೊಂದುವ ಎನ್ನುವ ಅಂಶವನ್ನು ಈಗ ಅಮೆರಿಕದ ನೆಲದಲ್ಲಿ ನಿರ್ಮಾಣ ಹಂತದಲ್ಲಿರುವ ಘಟಕಗಳು ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಜತೆಗೆ ಭಾರತದಿಂದ ಆಮದಾಗುವ ಕಿಚನ್ ಕ್ಯಾಬಿನ್ಗಳ ಆಮದಿನ ಮೇಲೆ ಶೇಕಡ 50ರಷ್ಟು, ಪೀಠೋಪಕರಣಗಳ ಮೇಲೆ ಶೇಕಡ 30ರಷ್ಟು ಹಾಗೂ ಘನ ವಾಹನಗಳ ಮೇಲೆ ಶೇಕಡ 30ರಷ್ಟು ಸುಂಕವನ್ನೂ ಟ್ರಂಪ್ ವಿಧಿಸಿದ್ದಾರೆ. ಅಮೆರಿಕದ ಪೀಟರ್ಬಿಲ್ಟ್, ಕೆನ್ವರ್ತ್, ಫ್ರೀಟ್ಲೈನರ್, ಮ್ಯಾಕ್ ಟ್ರಕ್ಸ್ ಮತ್ತಿತರ ಅಮೆರಿಕದ ಉತ್ಪಾದಕರನ್ನು ಬೆಂಬಲಿಸುವ ಸಲುವಾಗಿ ವಿಶ್ವದ ಇತರ ದೇಶಗಳಿಂದ ಆಮದಾಗುವ ಟ್ರಕ್ ಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲಾಗುತ್ತಿದೆ ಎಂದು ಪ್ರತ್ಯೇಕ ಪೋಸ್ಟ್ನಲ್ಲಿ ಟ್ರಂಪ್ ಹೇಳಿದ್ದಾರೆ.