ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ!

0
Spread the love

ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಸೌಂದರ್ಯವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ಡಾರ್ಕ್ ಸರ್ಕಲ್​ನಿಂದ ಮುಖದ ಲಕ್ಷಣ ಕಡಿಮೆಯಾಗುತ್ತದೆ. ಎದ್ದು ಕಾಣುವ ಡಾರ್ಕ್ ಸರ್ಕಲ್​ಗೆ ಕಾರಣ ಹಲವು ಇದೆ. ಕೆಲವೊಮ್ಮೆ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯಿಂದ ಹಲವರು ಮುಜುಗರಕ್ಕೆ ಒಳಗಾಗುತ್ತಾರೆ. ಎಷ್ಟೇ ಮದ್ದು ಹಚ್ಚಿದ್ದರೂ ಡಾರ್ಕ್ ಸರ್ಕಲ್ ಮಾತ್ರ ಕಡಿಮೆಯಾಗುತ್ತಿಲ್ಲ ಅಂತ ಚಿಂತೆ ಮಾಡುತ್ತಾರೆ. ಆದರೆ ಇದೀಗ ಚಿಂತೆ ಬಿಟ್ಟು ನಾವು ನೀಡಿರುವ ಪರಿಹಾರವನ್ನು ಗಮನಿಸಿ.

Advertisement

ಬಾದಾಮಿ ಎಣ್ಣೆ: ಎರಡರಿಂದ ಮೂರು ಬಿಂದು ಬಾದಾಮಿ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿಕೊಂಡರೆ ಬೆಳಗ್ಗೆ ಚೆನ್ನಾಗಿ ಮುಖ ತೊಳೆದುಕೊಂಡರೆ ಫ್ರೆಶ್‌ ಅನುಭವವಾಗುತ್ತದೆ. ನಿತ್ಯವೂ ರಾತ್ರಿ ಇದನ್ನು ಮಾಡಿಕೊಂಡರೆ ಕಣ್ಣಿನ ಸುತ್ತಲ ಕಪ್ಪುವರ್ತುಲ ನಿಧಾನವಾಗಿ ಮಾಯವಾಗುತ್ತದೆ.

ಆಲೋವೆರಾ ಅಥವಾ ಲೋಳೆಸರದ ಜೆಲ್:‌ ಒಂದು ಚಮಚದಷ್ಟು ಅಲೊವೆರಾ ಜೆಲ್‌ ಅನ್ನು ತೆಗೆದುಕೊಂಡು ಅದನ್ನು ಕಣ್ಣಿನ ಸುತ್ತ ಹಚ್ಚಿ ಮೆದುವಾಗಿ ವೃತ್ತಾಕಾರವಾಗಿ ಮಸಾಜ್‌ ಮಾಡಿಕೊಳ್ಳಿ. ರಾತ್ರಿ ಮಲಗುವಾಗ ಇದನ್ನು ಮಾಡಿಕೊಂಡು ಬೆಳಗ್ಗೆ ಎದ್ದು ತೊಳೆದುಕೊಳ್ಳಿ. ಹೀಗೆ ಪ್ರತಿನಿತ್ಯ ಮಾಡಿದರೆ ಕೆಲ ದಿನಗಳಲ್ಲಿ ಉತ್ತಮ ಫಲ ಕಾಣಬಹುದು.

ಸೌತೆಕಾಯಿ: ಸೌತೆಕಾಯಿಯಲ್ಲಿ ಬಯೋಆಕ್ಟೀವ್‌ ಗುಣಗಳಿರುವುದರಿಂದ ಚರ್ಮದ ಕಪ್ಪು ಕಲೆಗಳಿಗೆ ಇದು ಅತ್ಯಂತ ಒಳ್ಳೆಯದು. ಒಂದು ಚಮಚ ಸೌತೆಕಾಯಿ ರಸಕ್ಕೆ ಒಂದು ಚಮಚ ಅಲೊವೆರಾ ಜೆಲ್‌ ಸೇರಿಸಿ ಇದನ್ನು ಮುಖ ಹಾಗೂ ಕಣ್ಣಿನ ಸುತ್ತ ೧೫ರಿಂದ ೩೦ ನಿಮಿಷಗಳ ಕಾಲ ಹಚ್ಚಿಕೊಳ್ಳಬಹುದು. ನಿತ್ಯವೂ ಹೀಗೆ ಮಾಡುವುದರಿಂದ ಉತ್ತಮ ಪರಿಣಾಮ ಕಾಣಬಹುದು.

ಟೊಮೇಟೋ: ಟೊಮೆಟೋ ಹಾಗೂ ನಿಂಬೆರಸವನ್ನು ಮಿಕ್ಸ್‌ ಮಾಡಿಕೊಂಡು ಕಣ್ಣಿನ ಸುತ್ತ ಹಚ್ಚಿಕೊಂಡು ೨೦ ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ನಿತ್ಯವೂ ಮಾಡುವ ಅವಶ್ಯಕತೆಯಿಲ್ಲ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಬಹುದು. ಕೆಲವರ ಚರ್ಮಕ್ಕೆ ನಿಂಬೆರಸ ಸರಿ ಹೊಂದದೆ ಇರಬಹುದು. ಹಾಗಾಗಿ ಮೊದಲೇ ಚರ್ಮದ ಮೇಲೆ ಇನ್ನು ಪರೀಕ್ಷೆ ಮಾಡಿಕೊಂಡು ಕಣ್ಣಿನ ಸುತ್ತ ಹಚ್ಚಿ.

ಮೊಸರು: ಮೊಸರಿನ ಜೊತೆಗೆ ನಿಂಬೆರಸ ಸೇರಿಸಿಯೂ ಕಣ್ಣ ಸುತ್ತ ಹಚ್ಚಿಕೊಂಡು ೧೫-೨೦ ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು. ವಾರಕ್ಕೆರಡು ಬಾರಿ ಹೀಗೆ ಮಾಡಿಕೊಳ್ಳಿ. ನಿಂಬೆರಸ ಕೆಲವರಿಗೆ ಉರಿ ತರಬಹುದು, ಹಾಗಾಗಿ ಇದನ್ನು ಕಣ್ಣಿನ ಸುತ್ತ ಹಚ್ಚುವ ಮೊದಲು ಪರೀಕ್ಷಿಸಿಕೊಳ್ಳಿ.

ಆಲೂಗಡ್ಡೆ: ಹಸಿ ಆಲೂಗಡ್ಡೆಯ ರಸವನ್ನು ತೆಗೆದು ಅದನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದಕೂ ಕಪ್ಪು ವರ್ತುಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕೇಸರಿ: ಮೂರ್ನಾಲ್ಕು ಕೇಸರಿ ದಳಗಳನ್ನು ತೆಗೆದುಕೊಂಡು ಅದನ್ನು ೨-೩ ಚಮಚ ಹಾಲಿನಲ್ಲಿ ೨ ಗಂಟೆಗಳ ಕಾಲ ನೆನೆಸಿಡಿ. ಈ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು ೧೫ ನಿಮಿಷ ಬಿಟ್ಟು ತೊಳೆಯಿರಿ. ನಿತ್ಯವೂ ಇದನ್ನು ಮಾಡುವುದರಿಂದ ಕ್ರಮೇಣ ಕಲೆ ಮಾಯವಾಗುತ್ತದೆ.


Spread the love

LEAVE A REPLY

Please enter your comment!
Please enter your name here