ಕೊಪ್ಪಳ: ರೈತರ ಹಿತ ಕಾಯುವುದು ಸರ್ಕಾರದ ಕೆಲಸ. ನಾನು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಗೂಬೆ ಕೂರಿಸೋದೆ ಬಿಜೆಪಿಯವರಿಗೆ ಒಂದು ಕೆಲಸವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಇದ ಅವರು, ತುಂಗಭದ್ರಾ ಜಲಾಶಯ ಅತ್ಯಂತ ಹಳೆಯ ಡ್ಯಾಂ. ಸುಮಾರು 70 ವರ್ಷದಿಂದ ಲಕ್ಷಾಂತರ ರೈತರಿಗೆ ವರದಾನವಾಗಿದೆ.
ಡ್ಯಾಂ ಇತಿಹಾಸದಲ್ಲಿ ಈಥರದ ಸಮಸ್ಯೆಗಳು ಬಂದಿಲ್ಲ. ಇದರ ಬಗ್ಗೆ ಪಕ್ಷಬೇಧ ಮರೆತು ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ರೈತರ ಹಿತ ಕಾಯುವುದು ಸರ್ಕಾರದ ಕೆಲಸ. ನಾನು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಗೂಬೆ ಕೂರಿಸೋದೆ ಬಿಜೆಪಿಯವರಿಗೆ ಒಂದು ಕೆಲಸವಾಗಿದೆ ಎಂದು ಸಿಎಂ ಹೇಳಿದರು.
ಇನ್ನೂ ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಕಟ್ಟಾಗಿದೆ. ಅದಕ್ಕೆ ಬಿಜೆಪಿಯವರು ಇದರಲ್ಲಿ ರಾಜ್ಯ ಸರ್ಕಾರದ ಹೊಣೆಗೇಡಿತನ ಇದೆ ಎಂದು ಹೇಳುತ್ತಿದ್ದಾರೆ. ಹಾಗಂದ್ರೆ ಏನರ್ಥ? ಸದ್ಯ ಟಿಬಿ ಬೋರ್ಡ್ನಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳೋಕೆ ಹೋಗುವುದಿಲ್ಲ. ಸದ್ಯ ಜಲಾಶಯದಲ್ಲಿ ನೀರು ತುಂಬಿದ್ದು, ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಬೇಕಿದೆ. ಇನ್ನೂ 50-60 ಟಿಎಂಸಿ ನೀರು ಉಳಿಯುತ್ತದೆ. ಮುಂದೆ ಮಳೆಯಾಗಿ ಮತ್ತೆ ಜಲಾಶಯ ತುಂಬುತ್ತದೆ ಎಂಬ ಆಶಾಭಾವ ಇಟ್ಟುಕೊಳ್ಳೋಣ ಎಂದರು.



