ತುಂಗಭದ್ರಾ ನದಿ ನೀರು ಅಮೃತದಂತೆ : ಯಲ್ಲಮ್ಮ ದುರಗಣ್ಣವರ

0
Tungabhadra river basin
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣಕ್ಕೆ ಕುಡಿಯುವ ನೀರಿನ ಆಧಾರವಾದ ತುಂಗಭದ್ರಾ ನದಿಗೆ ಬಾಗಿನ ಸಮರ್ಪಿಸುವ ಸಂಪ್ರದಾಯವನ್ನು ಶುಕ್ರವಾರ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ನೆರವೇರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಲಕ್ಷ್ಮೇಶ್ವರ ತಾಲೂಕಿಗೆ ತುಂಗಭದ್ರಾ ನದಿ ಜೀವನದಿಯಾಗಿದೆ. `ಗಂಗಾಸ್ನಾನ-ತುಂಗಾಪಾನ’ ಗಂಗಾ ನದಿ ಸ್ನಾನಕ್ಕೆ ಶ್ರೇಷ್ಠವಾದರೆ ತುಂಗಭದ್ರಾ ನದಿ ನೀರು ಅಮೃತಕ್ಕೆ ಸಮಾನವಾಗಿದೆ. 25 ವರ್ಷಗಳಿಂದ ತುಂಗಭದ್ರಾ ನದಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದ್ದು, ಇದೀಗ ಪೈಪ್‌ಲೈನ್, ಯಂತ್ರೋಪಕರಣಗಳು ಪದೇ ಪದೇ ದುರಸ್ಥಿಗೊಳಗಾಗುತ್ತಿದ್ದು ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ.

ಹೊಸ ಪೈಪ್‌ಲೈನ್, ಯಂತ್ರೋಪಕರಣ ಅಳವಡಿಸುವ ಯೋಜನೆಗಾಗಿ ಸರ್ಕಾರಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. 8/10 ವರ್ಷಗಳ ಹಿಂದೆ ತುಂಗಭದ್ರಾ ನದಿಯಿಂದ ಕ್ಷೇತ್ರಕ್ಕೆ ನೀರು ಹರಿಸುವ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕು. ಹತ್ತಾರು ಸಮಸ್ಯೆಗಳ ನಡುವೆಯೂ ಪುರಸಭೆಯಿಂದ ನಿತ್ಯ ಸಾವಿರಾರೂ ಖರ್ಚು ಮಾಡಿ ನದಿ ನೀರನ್ನು ಶುದ್ಧೀಕರಣಗೊಳಿಸಿ ಪೂರೈಸಲಾಗುತ್ತಿದ್ದು, ಪಟ್ಟಣ ಮತ್ತು ಮಾರ್ಗ ಮಧ್ಯದ ಗ್ರಾಮಗಳ ಜನರು ನೀರನ್ನು ಪೋಲು ಮಾಡದೇ ಸಹಕಾರ, ಕಾಳಜಿ ತೋರಬೇಕು ಎಂದರು.

ಬಾಗಿನ ಅರ್ಪಿಸುವ ಕಾರ್ಯದಲ್ಲಿ ಪುರಸಭೆಯ ಉಪಾಧ್ಯಕ್ಷ ಫಿರ್ದೋಸ್ ಆಡೂರ, ಸದಸ್ಯರಾದ ರಾಜೀವ ಕುಂಬಿ, ಬಸವರಾಜ ಓದುನವರ, ರಾಮಪ್ಪ ಗಡದವರ, ಜಯಮ್ಮ ಅಂದಲಗಿ, ಮಂಜುಳಾ ಗುಂಜಳ, ಮಂಜವ್ವ ನಂದೆಣ್ಣವರ, ಮುಖ್ಯಾಧಿಕಾರಿ ಮಹೇಶ ಹಡಪದ, ಶಿವಾನಂದ ಅಜ್ಜಣ್ಣವರ, ಮಂಜುಳಾ ಹೂಗಾರ, ಮಂಜುನಾಥ ಮುದಗಲ್, ಹನಮಂತಪ್ಪ ನಂದೆಣ್ಣವರ ಸೇರಿ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here