ಕೊಪ್ಪಳ:- ಡ್ಯಾಂ ಗೇಟ್ ಮುರಿದಿರುವ ಹಿನ್ನೆಲೆ ತುಂಗಭದ್ರೆಯ ಒಡಲು ಕಾಪಾಡಲು ಸಾಹಸವೇ ನಡೆಯುತ್ತಿದ್ದು, ಭೋರ್ಗೆದು ಹರಿಯುತ್ತಿರುವ ನೀರಿನಲ್ಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಸಾಹಸ ನಡೆಯಲಿದೆ.
ಏನಾದರೂ ಮಾಡಿ ಹರಿಯುವ ನೀರಿಗೆ ತಾತ್ಕಾಲಿಕ ಬ್ರೇಕ್ ಹಾಕಲು ತಂತ್ರಜ್ಞರು ಮುಂದಾಗಿದ್ದಾರೆ. ಇದಕ್ಕಾಗಿ ತಾತ್ಕಾಲಿಕ ಗೇಟ್ ರೆಡಿಯಾಗುತ್ತಿದ್ದು, ಇಂದಿನಿಂದಲೇ ತಾತ್ಕಾಲಿಕ ಗೇಟ್ ಅಳವಡಿಕೆ ಆರಂಭವಾಗಲಿದೆ. 2 ಕ್ರೇನ್‌ಗಳ ಮೂಲಕ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.
ಗೇಟ್ ಅಳವಡಿಕೆ ಪ್ಲ್ಯಾನ್ 1 ಪ್ರಕಾರ, 60 ಅಡಿ ಉದ್ದದ ಗೇಟನ್ನ 12 ಪ್ಲೇಟ್ ಮಾಡಲಾಗಿದೆ. ಭೋರ್ಗರೆದು ಹರಿಯುವ ನೀರಿನಲ್ಲೇ 5 ಪ್ಲೇಟ್ ಇಳಿಸಲಾಗುತ್ತದೆ. ಆಪರೇಷನ್ ಸಕ್ಸಸ್ ಆದ್ರೆ ಉಳಿದ ಪ್ಲೇಟ್ ಅಳವಡಿಕೆ ಮಾಡಲಾಗುತ್ತದೆ. ಆ ಮೂಲಕ ಡ್ಯಾಂನಲ್ಲಿ ನೀರು ಇರೋವಾಗ್ಲೇ ಕಂಟ್ರೋಲ್ ಮಾಡಲಾಗುತ್ತದೆ. ಒಂದು ವೇಳೆ ನೀರಿನ ರಭಸಕ್ಕೆ ಪ್ಲೇಟ್‌ಗಳು ಕೊಚ್ಚಿ ಹೋದ್ರೆ ಪ್ಲ್ಯಾನ್-1 ಆಪರೇಷನ್ ಬಂದ್ ಆಗಲಿದೆ.
ಗೇಟ್ ಅಳವಡಿಕೆ ಪ್ಲ್ಯಾನ್ 2 ಪ್ರಕಾರ, ಡ್ಯಾಂನಲ್ಲಿನ 65 ಟಿಎಂಸಿ ನೀರು ಖಾಲಿ ಮಾಡಲಾಗುತ್ತದೆ. ಡ್ಯಾಂನ ನೀರು 40 ಟಿಎಂಸಿಗೆ ಇಳಿಸಲಾಗುತ್ತೆ. ನೀರಿನ ರಭಸ ನಿಲ್ಲುತ್ತಿದ್ದಂತೆಯೇ ಕಾರ್ಯಾಚರಣೆ ಶುರುವಾಗುತ್ತದೆ. ಆಗ ಶಾಶ್ವತವಾಗಿ ಕ್ರಸ್ಟ್ ಗೇಟ್ ಅಳವಡಿಸುತ್ತಾರೆ. ವಿಷಯ ಏನೆಂದರೆ, 2ನೇ ಕಾರ್ಯಾಚರಣೆ ಆರಂಭ ಮಾಡಬೇಕು ಎಂದರೆ ಇನ್ನೂ ಮೂರು ದಿನ ಕಾಯಲೇ ಬೇಕು.
ಇನ್ನೂ ತುಂಗಭದ್ರಾ ಡ್ಯಾಂ ವೀಕ್ಷಣೆಗೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಆಗಮಿಸಿ, ಮುರಿದು ಹೋದ ಗೇಟ್ ವೀಕ್ಷಿಸಿದ್ರು. ನೀರು ಉಳಿಸಲು ನಡೆಯುತ್ತಿರುವ ಕಾರ್ಯದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಸಿಎಂ, ನಾಲ್ಕೈದು ದಿನಗಳಲ್ಲಿ ರೆಡಿಯಾಗಲಿದೆ. ಆತಂಕ ಬೇಡ ಎಂದು ಭರವಸೆ ನೀಡಿದರು.