ಕೊಲೆ ಆರೋಪಿ ದರ್ಶನ್ ಗಾಗಿ ಬಳ್ಳಾರಿ ಜೈಲಿಗೆ ಬಂತು TV!

0
Spread the love

ಬಳ್ಳಾರಿ:-ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್‌ಗೆ ಕೊನೆಗೂ ಟಿವಿ ಭಾಗ್ಯ ಸಿಕ್ಕಿದೆ. ಸತತ ಮೂರನೇ ಬಾರಿಗೆ ದರ್ಶನ್ ಅವರ ಬೇಡಿಕೆಯನ್ನು ಜೈಲಧಿಕಾರಿಗಳು ಈಡೇರಿಸಿದ್ದಾರೆ.

Advertisement

ಕೊನೆಗೂ ದರ್ಶನ್ ಸೆಲ್‌ಗೆ ಟಿವಿ ಬಂದಿದೆ. ಕಳೆದ ಐದು ದಿನಗಳ ಹಿಂದೆ ಟಿವಿಗೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ಬಳಿಕ ಇಂದು ಬೆಳಗ್ಗೆ ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ.

ಜಾರ್ಜ್‌ಶೀಟ್‌ ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಇರುವ ಹಿನ್ನೆಲೆ, ಕಳೆದ ಮಂಗಳವಾರ ಟಿವಿ ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ. ಆದರೆ, ಇಂದು ದರ್ಶನ್ ಇರುವ ಸೆಲ್‌ಗೆ ಟಿವಿ ನೀಡಲಾಗಿದೆ.

ಹೈಯರ್ ಕಂಪನಿಯ 32 ಇಂಚಿನ ಟಿವಿಯನ್ನು ದರ್ಶನ್ ಇರುವ ಸೆಲ್‌ಗೆ ನೀಡಲಾಗಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಕೇಳಿದ್ದ ಮೂರು ಬೇಡಿಕೆಗಳು ಈಡೇರಿದಂತಾಗಿದೆ. ಸರ್ಜಿಕಲ್ ಚೇರ್ ಮೊದಲನೆಯದ್ದು. ಫೋನ್ ಕಾಲ್ ಮಾತನಾಡೋಕೆ ಅವಕಾಶ ಕೇಳಿದ್ದು ಎರಡನೆಯದ್ದು. ಇದೀಗ ಟಿವಿ ನೀಡುವ ಮೂಲಕ ದರ್ಶನ್ ಮೂರು ಬೇಡಿಕೆ ಈಡೇರಿಸಿದಂತಾಗಿದೆ.


Spread the love

LEAVE A REPLY

Please enter your comment!
Please enter your name here