ಬೆಂಗಳೂರು:- ಮನೆಯಲ್ಲಿ ಎಲ್ಲರ ಮುಂದೆ ಪತಿ ಬೆತ್ತಲೆಯಾಗಿ ಓಡಾಡ್ತಾನೆ ಹಾಗೂ ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡ್ತಾನೆ ಎಂದು ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಮೇಘಶ್ರೀ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಪತ್ನಿ ನೀಡಿದ್ದ ಗಂಭೀರ ಆರೋಪಗಳ ಪ್ರಕರಣದಲ್ಲಿ ಇದೀಗ ಹೊಸ ತಿರುವು ಸಿಕ್ಕಿದ್ದು, ಆರೋಪಿ ಪತಿ ಮಂಜುನಾಥ್ ಇದೀಗ ಪತ್ನಿ ಮೇಘಶ್ರೀ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ. ತನ್ನ ಮೇಲೆ ಸೈಕೋ ವರ್ತನೆ ಆರೋಪ ಮಾಡಿದ ಮೇಘಶ್ರೀಗೆ ಈಗಾಗಲೇ ಹಲವು ಮದುವೆಗಳಾಗಿದ್ದು, ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದಾಳೆ ಎಂದು ಮಂಜುನಾಥ್ ದೂರಿದ್ದಾರೆ.
ಶೋಕಿಗಾಗಿ ಗಂಡಂದಿರ ಹಣ ಹಾಗೂ ಚಿನ್ನಾಭರಣ ದುರುಪಯೋಗ ಮಾಡಿಕೊಂಡು, ಎರಡನೇ ಗಂಡನ ಜೊತೆ ಜಾಲಿ ಟ್ರಿಪ್‌ಗಳಿಗೆ ಹೋಗಿದ್ದಾಳೆ ಎಂದು ಆರೋಪಿಸಿದ ಅವರು, ಮೂರನೇ ಗಂಡನಾಗಿ ನನ್ನನ್ನು ಬಲೆಗೆ ಬೀಳಿಸಿ ಸುಮಾರು 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಫೋನ್, ಐಪ್ಯಾಡ್ ಮತ್ತು ಟ್ಯಾಬ್‌ಗಳನ್ನು ಪಡೆದಿದ್ದಾಳೆ ಎಂದಿದ್ದಾರೆ.
ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಹೇಳಿ ತನ್ನ ವಿರುದ್ಧ ದೂರು
ನೀಡಿದ್ದಾಳೆ. ಆದರೆ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆಕೆ ನೀಡಿಲ್ಲ. ಅಲ್ಲದೆ, ಮನೆಯಲ್ಲಿ ಬಟ್ಟೆ ಬದಲಿಸುವ ವೇಳೆ ಕದ್ದು ಫೋಟೋ ತೆಗೆದು, ಫೇಕ್ ದಾಖಲೆಗಳ ಮೂಲಕ ಆರೋಪ ಮಾಡಿದ್ದಾಳೆ.
ಆಕೆಯ ಮೋಸದ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕೂಡ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕು ಎಂದು ಪತ್ನಿ ಮೇಘಶ್ರೀ ವಿರುದ್ಧ ಆರೋಪಗಳ ಸುರಿಮಳೆಗೈದರು.



