ಕಲಬುರ್ಗಿ:- ವಕೀಲ ಈರಣ್ಣಗೌಡನ ಕೊಲೆ ಪ್ರಕರಣದ ಪ್ರಮುಖ ಆರೋಪಿ ನೀಲಕಂಠ ಹಲ್ಲೆ ಮಾಡ್ತಿರೋ ಹಳೆ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್ ಆಗಿದೆ.
Advertisement
ಈರಣ್ಣಗೌಡನ ದೊಡ್ಡಪ್ಪ ಬಸವಣ್ಣಪ್ಪನ ಮೇಲೆ ಆರೋಪಿ ನೀಲಕಂಠ 2015 ರಲ್ಲಿ ಹಲ್ಲೆ ಮಾಡಿದ್ದ ಮನೆಗೆ ಬಂದು ಹಲ್ಲೆ ಮಾಡಿದ 7 ವರ್ಷಗಳ ಹಿಂದಿನ ವಿಡಿಯೋ ಇದೀಗ ಮತ್ತೆ ಸೌಂಡ್ ಮಾಡ್ತಿದೆ. ಈರಣ್ಣಗೌಡನ ಆಸ್ತಿ ವಿವಾದ ಬಗೆಹರಿಸ್ತೇನೆ ಅದ್ರಲ್ಲಿ ನನಗೂ ಪಾಲು ಕೊಡಬೇಕು ಅಂತ ಬೇಡಿಕೆ ಇಟ್ಟಿದ್ದ ಆದ್ರೆ ಬೇಡಿಕೆ ಈಡೇರಿರಲಿಲ್ಲ.
ವಿಪರ್ಯಾಸ ಅಂದ್ರೆ ಮೊನ್ನೆ ಡಿಸೆಂಬರ್ 7 ರಂದು ಇದೇ ವಿಚಾರಕ್ಕೆ ಸಂಭಂಧಿಸಿದಂತೆ ಕೋರ್ಟಿಗೆ ಹೊರಡುವ ವೇಳೆ ಈರಣ್ಣಗೌಡನ ಕೊಲೆ ಮಾಡಿಸಿಬಿಟ್ಟ. ಅದೇ ಕೊಲೆ ಆರೋಪದ ಮೇಲೆ ನೀಲಕಂಠ ಅರೆಸ್ಟ್ ಆಗಿದ್ದಾನೆ ಎಂದು ಹೇಳಲಾಗಿದೆ.