ರಾಮನಗರ:- ಭೂಮಿಯ ವಿಚಾರದಲ್ಲಿ ಉಂಟಾದ ವಿವಾದ ತೀವ್ರ ರೂಪ ಪಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ಸಂಭವಿಸಿದೆ.
Advertisement
ಮೃತನನ್ನು ಸುನೀಲ್ (30) ಎಂದು ಗುರುತಿಸಲಾಗಿದ್ದು, ಈ ಸಂಬಂಧ ಪಾರ್ಥಸಾರಥಿ ಮತ್ತು ಅವರ ಪುತ್ರ ಆಕಾಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸುನೀಲ್‌ನ ತಂದೆ ಮುನಿರಾಜು ಅವರು ಪಾರ್ಥಸಾರಥಿಗೆ ಸುಮಾರು ಒಂದೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಜಮೀನು ವಿಚಾರವಾಗಿ ಸುನೀಲ್ ಹಾಗೂ ಅವರ ಸಹೋದರ ಕಿರಣ್ ಪಾರ್ಥಸಾರಥಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ, ಮಾತಿನ ಚಕಮಕಿ ಉಂಟಾಗಿ, ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.