ಸುಡುವ ಸಾಂಬಾರ್ ಮೈಮೇಲೆ ಬಿದ್ದು ಎರಡುವರೆ ವರ್ಷದ ಮಗು ಸಾವು!

0
Spread the love

ಹುಬ್ಬಳ್ಳಿ:- ಸುಡುವ ಸಾಂಬಾರ್ ಮೈಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಎರಡುವರೆ ವರ್ಷದ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಶಿಗ್ಗಾಂವ ತಾಲೂಕಿನ ಕುಣ್ಣುರು ಗ್ರಾಮದಲ್ಲಿ ಜರುಗಿದೆ. ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಎರಡುವರೆ ವರ್ಷದ ರುಕ್ಸಾನಾಬಾನು ಶೇಖಸನದಿ ಮೃತ ಮಗು.

Advertisement

ಐದು ದಿನಗಳ ಹಿಂದೆ ಹೆತ್ತವರು ಮಗಳನ್ನು ಕರೆದುಕೊಂಡು ಶಿಗ್ಗಾಂವ ತಾಲೂಕಿನ ಕುಣ್ಣುರು ಗ್ರಾಮದಲ್ಲಿ ಸಂಬಂಧಿಯ ಮದುವೆಗೆ ಹೋಗಿದ್ದರು. ಮದುವೆ ಮನೆಯಲ್ಲಿ ಪಾತ್ರೆಯಲ್ಲಿದ್ದ ಸುಡುವ ಸಾಂಬಾರು ಬಾಲಕಿ ಮೈಮೇಲೆ ಬಿದ್ದಿದೆ. ಕೂಡಲೇ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಮೆಲೆ ಅನೇಕ ಕಡೆ‌ ಸುಟ್ಟ ಗಾಯಗಳಾಗಿದ್ದರಿಂದ ಬಾಲಕಿ ನರಳಾಡಿದ್ದಾಳೆ. ಆದರೆ, ಸ್ವಲ್ಪ ಗುಣಮುಖರಾಗಿದ್ದರಿಂದ ಮೊನ್ನೆ ಬಾಲಕಿಯನ್ನು ಡಿಸ್ಜಾರ್ಜ್ ಮಾಡಲಾಗಿತ್ತು. ಆದರೆ, ಶುಕ್ರವಾರ ಮುಂಜಾನೆ ಮತ್ತೆ ಮೈಮೇಲೆ ಗುಳ್ಳೆಗಳಾಗಿದ್ದರಿಂದ ಬಾಲಕಿಯನ್ನು ಹೆತ್ತವರು ಮತ್ತೆ ಕಿಮ್ಸ್​ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಕಿಮ್ಸ್​ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here