ಪಡುಬಿದ್ರಿ: ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿರುವ ಘಟನೆ ಇಲ್ಲಿನ ಬಡಾ ಗ್ರಾಮ ಉಚ್ಚಿಲ ಪೊಲ್ಯ ರಸ್ತೆಯ ಜುಬುಲ್ ಮೈದಾನದಲ್ಲಿ ಜರುಗಿದೆ.
Advertisement
ಆರೋಪಿಗಳ ವಿರುದ್ದ ಮಾದಕವಸ್ತು ಮಾರಾಟ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹಾನ್ (27) ಹಾಗೂ ಕಾಪು ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಹಾಸಿಂ (21) ಬಂಧಿತರು.
ಆರೋಪಿಗಳಿಂದ ಸುಮಾರು 30 ಸಾವಿರ ರೂ. ಮೌಲ್ಯದ 9.37 ಗ್ರಾಂ ತೂಕದ ಎಂಡಿಎಂಎ ಮಾತ್ರೆ ಗಳ ಪ್ಯಾಕೆಟ್‌ಗಳು, 5 ಸಾವಿರ ರೂ. ನಗದು, ವಿವೋ ಕಂಪೆನಿಯ ಒಂದು ಮೊಬೈಲ್ ಹಾಗೂ ಆರೋಪಿಗಳು ಬಳಸಿದ್ದ ಮೋಟಾರು ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.