ವಿಜಯನಗರ:- ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದೆ.
40 ವರ್ಷದ ಪಾಸ್ಟರ್ ನೆಕ್ಸೋನ್, 36 ವರ್ಷದ ಅರುಣ್ ಮೃತ ದುರ್ದೈವಿಗಳು. ಕೊಟ್ಟೂರು ಪಟ್ಟಣದಿಂದ ಹೂವಿನ ಹಡಗಲಿಯಲ್ಲಿನ ಚರ್ಚ್ ಗೆ ಆಗಮಿಸುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕೊಟ್ಟೂರಿನ ಕ್ವೀನ್ ಮೇರಿ ಶಾಲೆಯ ವ್ಯವಸ್ಥಾಪಕ ಪಾಸ್ಟರ್ ನೆಕ್ಸೋನ್ ಮತ್ತು ಅರುಣ್ ಬೈಕ್ ನಲ್ಲಿ ಬರುವಾಗ ಈ ಘಟನೆ ನಡೆದಿದ್ದು, ಪಾಸ್ಟರ್ ನೆಕ್ಸೋನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅರುಣ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



