ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ: ಮಧ್ಯಪ್ರದೇಶದಲ್ಲಿ ತಪ್ಪಿದ ಭಾರೀ ದುರಂತ!

0
Spread the love

ಮಧ್ಯಪ್ರದೇಶ:- ರಾಣಿ ಕಮಲಾಪತಿ-ಸಹರ್ಸಾ ವಿಶೇಷ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಘಟನೆ ಜರುಗಿದೆ.

Advertisement

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಪ್ಲಾಟ್ ಫಾರ್ಮ್ ಸಂಖ್ಯೆ 2 ಅನ್ನು ಪ್ರವೇಶಿಸುತ್ತಿದ್ದಾಗ ಅದರ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ತಪ್ಪಿದಾಗ ರೈಲು 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವನೀಯ ದುರಂತ ತಪ್ಪಿದೆ.

ಅಪಘಾತ ಸಂಭವಿಸಿದ ಎರಡೂವರೆ ಗಂಟೆಗಳ ನಂತರವೂ ರೈಲು ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಜಂಕ್ಷನ್ನಲ್ಲಿ ನಿಂತಿತ್ತು.

ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್​ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್​ಫೀಲ್ಡ್ ಲಿಮಿಟೆಡ್ ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.

ಆಗಸ್ಟ್ 9 ರಂದು ಉತ್ತರ ಪ್ರದೇಶದ ಅಲಿಗಢದ ಬಳಿ ಕಲ್ಲಿದ್ದಲು ಸೈಡಿಂಗ್​ನಲ್ಲಿ ಸರಕು ರೈಲಿನ ಎರಡು ಖಾಲಿ ವ್ಯಾಗನ್​ಗಳು ಹಳಿ ತಪ್ಪಿದ್ದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮೇದ್ಪುರ ನಿಲ್ದಾಣದ ಬಳಿ ಸರಕು ರೈಲಿನ ಐದು ವ್ಯಾಗನ್ಗಳು ಹಳಿ ತಪ್ಪಿವೆ.

ಬಿಹಾರದ ಕಟಿಹಾರ್ ಜಿಲ್ಲೆಯ ಕುಮೇದ್ಪುರ ಸೇತುವೆ ಬಳಿ ಸರಕು ರೈಲಿನ ಐದು ಟ್ಯಾಂಕ್ ವ್ಯಾಗನ್ಗಳು ಹಳಿ ತಪ್ಪಿವೆ.

ಹಳಿ ತಪ್ಪಿದ ಕಾರಣ ಹಳಿಗೆ ಅಡ್ಡಿಯುಂಟಾಗಿದ್ದು, ಸುಗಮ ರೈಲು ಕಾರ್ಯಾಚರಣೆಗಾಗಿ ಮಾರ್ಗಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here