ಚಿಕ್ಕಮಗಳೂರು:- ಜಿಲ್ಲೆಯ ಪ್ರಸಿದ್ಧ ದೇವಿರಮ್ಮ ಬೆಟ್ಟ ಏರಿಕೆಯಲ್ಲಿ ಸೋಮವಾರ ಇಬ್ಬರು ಭಕ್ತರು ಅಸ್ವಸ್ಥರಾದ ಘಟನೆ ನಡೆದಿದೆ. ಭಕ್ತರೊಬ್ಬರು ಏರುವ ವೇಳೆಯಲ್ಲಿ ಶಾರೀರಿಕವಾಗಿ ಅಸ್ವಸ್ಥಗೊಂಡು ಮಧ್ಯದಲ್ಲೇ ಕುಸಿದರೆ, ಮತ್ತೊಬ್ಬರು ಜಾರಿಕೆಯಲ್ಲಿ ಕಾಲು ಉಳುಕಿಸಿಕೊಂಡು ಗಾಯಗೊಂಡಿದ್ದಾರೆ.
Advertisement
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಇಬ್ಬರನ್ನೂ ಸ್ಟ್ರೆಚರ್‌ನಲ್ಲಿ ಹೊತ್ತು ಸುರಕ್ಷಿತವಾಗಿ ಬೆಟ್ಟದ ಕೆಳಭಾಗಕ್ಕೆ ತಂದು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಬೆಟ್ಟದ ಇಳಿಜಾರಿನಲ್ಲಿ ಭಾರೀ ಸೊರೆ ಇರುವುದು ಕಾರಣ, ಭಕ್ತರು ತೆವಳುತ್ತಾ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುರಕ್ಷತೆಗಾಗಿ ಅರ್ಧ ಬೆಟ್ಟದವರೆಗೆ ಹಗ್ಗ ಹಾಕಿ ಪೊಲೀಸರು ಕಾವಲು ನಿಂತಿದ್ದಾರೆ. ಯಾವುದೇ ಅನಾಹುತ ತಪ್ಪಿಸಲು ಐದು ಆಂಬುಲೆನ್ಸ್‌ಗಳನ್ನು ಸ್ಥಳದಲ್ಲೇ ಸಿದ್ಧಗೊಳಿಸಲಾಗಿದೆ.