ಚಿಕ್ಕಬಳ್ಳಾಪುರ:- ಶೋಕಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಚೇತನ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಈ ಇಬ್ಬರೂ ಒಂದೇ ಕಾಲೇಜಲ್ಲಿ ವ್ಯಾಸಂಗ ಮಾಡ್ತಿರೋದ್ರಿಂದ ಸ್ನೇಹಿತರಾಗಿದ್ರು. ಇಬ್ಬರಿಗೂ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ ಇತ್ತಂತೆ. ಆದ್ರೆ ಕೈಯಲ್ಲಿ ದುಡ್ಡಿಲ್ಲ, ಇದಕ್ಕಾಗಿ ಇಬ್ಬರು ಪ್ಲ್ಯಾನ್ ಮಾಡಿ ಚಿಕ್ಕಬಳ್ಳಾಪುರ ನಗರದ ಚೇತನ್ ಮನೆ ಪಕ್ಕದಲ್ಲೇ ಇರುವ ಮನೆಗಳಿಗೆ ಕನ್ನ ಹಾಕಿದ್ದಾರೆ.
ಹಾಗೂ ಚಾಮರಾಜಪೇಟೆಯ ಶಿಕ್ಷಕಿ ವಿನುತಾ ಹಾಗೂ ಶಾಂತಮ್ಮ ಎಂಬುವವರ ಮನೆಗಳಿಗೆ ನುಗ್ಗಿ ಚಿನ್ನಾಭರಣ ಸೇರಿ ಲಕ್ಷಾಂತರ ರೂಪಾಯಿ ನಗದು ದೋಚಿ ಇಬ್ಬರು ಮೋಜು ಮಸ್ತಿ ಮಾಡಿದ್ರು. ಆದರೆ ಈಗ ಚಿಕ್ಕಬಳ್ಳಾಪುರ ಪೊಲೀಸರು ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ



