ಆಟೋದಲ್ಲಿಯೇ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ..!

0
Spread the love

ಬೆಳಗಾವಿ: ಆಟೋದಲ್ಲಿಯೇ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್ (28), ರಂಜೀತಾ ಚೋಬರಿ (26) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಗಳಾಗಿದ್ದು,

Advertisement

ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, 15 ದಿನದ ಹಿಂದೆಯಷ್ಟೇ ಮೃತ ರಂಜೀತಾಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಿತಾರ್ಥವಾಗಿತ್ತು. ಇದರಿಂದ ರಾಘವೇಂದ್ರ ಹಾಗೂ ರಂಜೀತಾ ಇಂದು ಆಟೋದಲ್ಲಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುನವಳ್ಳಿ ಪಟ್ಟಣದ ರಾಘವೇಂದ್ರ, ರಂಜೀತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಆದರೆ, ಮನೆಯಲ್ಲಿ ರಂಜೀತಾ 15 ದಿನಗಳ ಹಿಂದೆ ಅಷ್ಟೇ ಬೇರೊಬ್ಬ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇದರಿಂದ ಮನನೊಂದ ರಂಜೀತ, ಈ ವಿಚಾರವನ್ನು ಆಟೋ ಓಡಿಸಿಕೊಂಡಿದ್ದ ಪ್ರಿಯಕರ ರಾಘವೇಂದ್ರಗೆ ತಿಳಿಸಿದ್ದಾಳೆ.

ಇದರಿಂದ ಮನನೊಂದು ಇಬ್ಬರು ಒಟ್ಟಿಗೆ ಸಾಯಲು ತೀರ್ಮಾನಿಸಿ, ಇಂದು ಬೆಳಗ್ಗೆ ಇಬ್ಬರೂ ಆಟೋದಲ್ಲಿ ಚಿಕ್ಕನಂದಿ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಬಳಿಕ ಪ್ರಿಯಕರ ಓಡಿಸುತ್ತಿದ್ದ ಆಟೋದಲ್ಲೇ ಇಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here