ಬೆಂಗಳೂರು:- ಬೆಂಗಳೂರಿನ ತಿಲಕ್‌ನಗರದಲ್ಲಿ ಇಬ್ಬರು ಯುವಕರು ಒಂದೇ ಯುವತಿಯನ್ನು ಪ್ರೀತಿಸಿ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಜರುಗಿದೆ.
Advertisement
ಕಳೆದ ಕೆಲ ತಿಂಗಳ ಹಿಂದೆ ಕಿರಣ್ ಮತ್ತು ಯುವತಿ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರಿಬ್ಬರ ನಡುವೆ ವೈಮನಸ್ಸು ಮೂಡಿ, ಯುವತಿ ಮತ್ತೊಬ್ಬ ಯುವಕ ಜೀವನ್ ಜೊತೆಗೆ ಒಡಾಡುತ್ತಿದ್ದಳು. ಈ ವಿಚಾರ ತಿಳಿದ ಕಿರಣ್, ಯುವತಿಗೆ ಕರೆ ಮಾಡಿ ಮೀಟ್ ಮಾಡುವಂತೆ ಹೇಳಿದ್ದ. ಯುವತಿ ಬರುವಾಗ ಜೀವನ್ ಜೊತೆಗೆ ಬಂದಿದ್ದಳು. ಈ ವೇಳೆ ಮೂವರ ನಡುವೆ ಗಲಾಟೆ ನಡೆದು ಜೀವನ್, ಕಿರಣ್ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಈ ಸಂಬಂಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.