ದರ್ಶನ್ ಮಧ್ಯಂತರ ಜಾಮೀನು ಮುಗಿಯಲು ಇನ್ನು ಎರಡೇ ದಿನ ಬಾಕಿ: ಮತ್ತೆ ಜೈಲು ಸೇರ್ತಾರಾ ದಾಸ?

0
Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ದರ್ಶನ್ ಹೊರ ಬಂದು ಒಂದೂವರೆ ತಿಂಗಳು ಕಳೆಯುತ್ತಾ ಬಂದಿದ್ದು ಅವರ ಮಧ್ಯಂತರ ಜಾಮೀನು ಅವಧಿ ಡಿಸೆಂಬರ್ 11ರಂದು ಪೂರ್ಣಗೊಳ್ಳಲಿದೆ. ಅಂದರೆ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಗಿಯಲು ಇನ್ನೂ ಎರಡೇ ಎರಡು ದಿನ ಮಾತ್ರವೇ ಭಾಕಿ ಇದೆ.

Advertisement

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಲೆಂದೇ ಜಾಮೀನು ಪಡೆದಿದ್ದರು. ಆದರೆ, ಈವರೆಗೆ ಅದನ್ನು ಮಾಡಿಸಿಲ್ಲ. ಈ ಕಾರಣ ನೀಡಿ ಅವರ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲು ದರ್ಶನ್ ಪರ ವಕೀಲರು ಮನವಿ ಮಾಡಬಹುದು. ಹಾಗಾದಲ್ಲಿ, ಅವರು ಮತ್ತೆ ಬಳ್ಳಾರಿ ಜೈಲಿಗೆ ತೆರಳಬೇಕಾಗುತ್ತದೆ.

ಇಂದು (ಡಿಸೆಂಬರ್ 9) ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಲಿದೆ. ಈ ವೇಳೆ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ಮಧ್ಯಂತರ ಜಾಮೀನು ಅವಧಿ ವಿಸ್ತರಣೆಗೆ ಮನವಿ ಮಾಡುವ ಸಾಧ್ಯತೆ ಇದೆ. ದರ್ಶನ್ ಜಾಮೀನು ಅರ್ಜಿ ವಿರೋಧಿಸಿ SPP ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ.

ಈಗಾಗಲೇ ಸರ್ಕಾರ ಪರ ವಕೀಲರಾದ ಪ್ರಸನ್ನ ಅವರು ವಾದ ಮಾಡುತ್ತಿದ್ದಾರೆ. ಇಂದು ಕೂಡ ಅವರು ತಮ್ಮ ವಾದಮಂಡನೆ ಮುಂದುವರಿಸಲಿದ್ದಾರೆ. ‘ಕೋರ್ಟ್ ದಿಕ್ಕು ತಪ್ಪಿಸಲು ಸರ್ಜರಿ ಕಾರಣ ನೀಡಿದ್ದಾರೆ. ಬಿಪಿ ಏರಿಳಿತ ಸರಿಪಡಿಸಲು ಎರಡೂಕಾಲು ರೂಪಾಯಿಯ ಮಾತ್ರೆ ಸಾಕು’ ಎಂದಿರುವ ಪ್ರಸನ್ನ ಕುಮಾರ್, ಸರ್ಜರಿ ಮುಂದೂಡಿಕೆಗೆ ಆಕ್ಷೇಪ ಹೊರಹಾಕಿದ್ದಾರೆ. ಆದ್ರೆ ಇದುವರೆಗೂ ಶಸ್ತ್ರ ಚಿಕಿತ್ಸೆಗೆ ಒಳಗಾಗದ ಕಾರಣ ಅವರ ಜಾಮೀನು ಅರ್ಜಿ ವಜಾಕ್ಕೂ ಸರ್ಕಾರಿ ವಕೀಲು ಮನವಿ ಮಾಡಲಿದ್ದಾರೆ. ಹಾಗಾದಲ್ಲಿ ದರ್ಶನ್ ಮತ್ತೆ ಬಳ್ಳಾರಿ ಜೈಲು ಸೇರುವುದು ಕನ್ಪಾರ್ಮ್ ಆಗಿದೆ.

ರೇಣುಕಾಸ್ವಾಮಿಯ ಅಪಹರಣವೇ ಆಗಿಲ್ಲ ಎಂದು ಸಿವಿ ನಾಗೇಶ್ ಹೇಳಿದ್ದರು. ಆದರೆ, ಇದನ್ನು ಪ್ರಸನ್ನ ಕುಮಾರ್ ತಳ್ಳಿ ಹಾಕಿದ್ದಾರೆ. ರೇಣುಕಾ ಸ್ವಾಮಿಯನ್ನು ಮೋಸದಿಂದ ಅಪಹರಿಸಿದ್ದಾರೆಂದು ವಾದ ಮಾಡಿದ್ದಾರೆ. ‘ಅಶ್ಲೀಲ ಮೆಸೇಜ್ ಬಂದಾಗ ಬ್ಲಾಕ್ ಮಾಡಬಹುದಿತ್ತು. ಆದರೆ ಪವಿತ್ರಾಗೌಡ ಹೆಸರಲ್ಲಿ ಪವನ್ ಚಾಟ್ ಮಾಡಿದ್ದಾನೆ. ಪವಿತ್ರಾಗೌಡ ಸೂಚನೆ ಮೇರೆಗೆ ಹಿಂಬಾಲಿಸಿದ್ದಾರೆ. ಶೆಡ್​​ಗೆ ಕರೆತಂದು ಹಲ್ಲೆ ನಡೆಸಿದಾಗ ನಟ ದರ್ಶನ್ ಅಲ್ಲಿದ್ದರು. ದರ್ಶನ್ ಸೇರಿ ಆರೋಪಿಗಳು ಸ್ಥಳದಲ್ಲಿ ಇದ್ದಿದ್ದಕ್ಕೆ ತಾಂತ್ರಿಕ ಸಾಕ್ಷಿಗಳು ಇವೆ’ ಎಂದಿದ್ದಾರೆ ಪ್ರಸನ್ನ ಕುಮಾರ್.

 


Spread the love

LEAVE A REPLY

Please enter your comment!
Please enter your name here