ಬೆಂಗಳೂರು:- ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಐವರಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ ಜರುಗಿದೆ.
Advertisement
20 ವರ್ಷದ ದೀಪು, 20 ವರ್ಷದ ಯೋಗಿಶ್ವರನ್ ಮೃತ ಯುವಕರು. ಮೊಬೈಲ್ ಕ್ಯಾಮರಾದಲ್ಲಿ ಇಬ್ಬರು ವಿದ್ಯಾರ್ಥಿಗಳ ಕೊನೆಯ ದೃಶ್ಯ ಸೆರೆಯಾಗಿದೆ. ಬೊಮ್ಮಸಂಸ್ರದ ಎಸ್ಎಫ್ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿಗೆ ತೆರಳಿದ್ದಾರೆ.
ಬಳಿಕ ಕಲ್ಯಾಣಿಗೆ ಈಜಲು ಇಳಿದಿದ್ದಾರೆ. ಈ ಪೈಕಿ ದೀಪು, ಯೋಗೇಶ್ವರ್ಗೆ ಈಜಲು ಆಗದೆ ಪರದಾಡಿದ್ದಾರೆ. ಕೆಲ ಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇತ್ತ ರಕ್ಷಣೆ ಮಾಡಲು ಸಾಧ್ಯವಾಗದೆ ಉಳಿದ ಸ್ನೇಹಿತರು ಕಂಗಾಲಾಗಿದ್ದಾರೆ.
ಈಜಲು ಬಾರದೆ ಒಬ್ಬರಾದ ಮೇಲೆ ಒಬ್ಬರಂತೆ ಇಬ್ಬರು ಸ್ನೇಹಿತರು ಇನ್ನುಳಿದ ಸ್ನೇಹಿತರ ಕಣ್ಣೆದುರೇ ಮುಳುಗಿ ಪ್ರಾಣಬಿಟ್ಟಿದ್ದಾರೆ.