ಚಾಮರಾಜನಗರ:- ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದೆ.
ಕಾಯಿ ಕೀಳಲು ಜಮೀನಿಗೆ ಹೋದ ಇಬ್ಬರು ವ್ಯಕ್ತಿಗಳು ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ.
Advertisement
ಮೃತರಾದವರು ಸ್ವಾಮಿ ಮತ್ತು ಕೃಷ್ಣ. ಈ ಘಟನೆ ಪ್ರಕಾಶ್ ಎಂಬುವವರ ಜಮೀನಿನಲ್ಲಿ ನಡೆದಿದೆ. ಅವರ ಜಮೀನು ಕೇರಳ ಮೂಲದವರಿಗೆ ಗುತ್ತಿಗೆಗೆ ನೀಡಲಾಗಿತ್ತು. ಕಾಡು ಪ್ರಾಣಿಗಳಿಂದ ಬೆಳೆ ಉಳಿಸಲು ಅಕ್ರಮವಾಗಿ ವಿದ್ಯುತ್ ಹರಿಸಲಾಗಿತ್ತು. ಅದೇ ವಿದ್ಯುತ್‌ಗೆ ಇಬ್ಬರು ಸ್ಪರ್ಶವಾದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.