ವಿಜಯಪುರ: ತೆಪ್ಪ ಮಗುಚಿ ಬಿದ್ದು ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ವಿಜಯಪುರ ತಾಲೂಕಿ ಕುಮಟಗಿ ಕೆರೆಯಲ್ಲಿ ನಿನ್ನೆ ಸಾಯಂಕಾಲ ನಡೆದಿದೆ. ಸೋಯಲ್ ಹತ್ತರಕಿಹಾಳ(25) ಮತ್ತು ನಿಸಾರ್ ಜಮಾದಾರ್(19) ಮೃತರಾಗಿದ್ದು,
Advertisement
ಅಸ್ವಸ್ಥಗೊಂಡಿದ್ದ ನಿಸಾರ್ ಜಮಾದಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ. ಕುಮಟಗಿ ಕೆರೆಯಲ್ಲಿ ಆರು ಯುವಕರು ತೆಪ್ಪ ತೆಗದುಕೊಂಡು ಹೋಗಿದ್ದರು. ಮೋಹಸಿನ್ ಮುಲ್ಲಾ, ತೌಫೀಕ್, ಮೋಹಸೀನ್ ಹಾಗೂ
ರಿಯಾಜ್ ಅಪಾಯದಿಂದ ಪಾರಾದ ಯುವಕರು. ಸದ್ಯ ಮೊಹಮ್ಮದ್ ಕೈಪ್ ಹಾಗೂ ಸೋಯಲ್ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ತರಿಗೆ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.