ಭೀಕರ ಕಾರು ಅಪಘಾತ: NSUI ಮುಖಂಡ ಸೇರಿ ಇಬ್ಬರು ಸಾವು

0
Spread the love

ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಎನ್‌ಎಸ್‌ಯುಐ ಮುಖಂಡ ಓಂ ಶ್ರೀ ಹಾಗೂ ಕದ್ರಿ ನಿವಾಸಿ ಅಮನ್ ರಾವ್ ಮೃತ ದುರ್ಧೈವಿಗಳಾಗಿದ್ದು,

Advertisement

ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದ್ದು, ಕಾರು ನಜ್ಜುಗುಜ್ಜಾಗಿದೆ. ಐವರು ಯುವಕರಿದ್ದ ಕಾರು ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಂಶಿ ಮತ್ತು ಆಶಿಕ್‌ಗೆ ಗಂಭೀರ ಗಾಯಗಳಾಗಿದ್ದು,

ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಗೆಳೆಯ ಇಟಲಿ ಮೂಲದ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಇಬ್ಬರು ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಘಟನೆ ಸಂಬಂಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 


Spread the love

LEAVE A REPLY

Please enter your comment!
Please enter your name here