ಯಾದಗಿರಿ:- ಕಾಲುವೆಯಲ್ಲಿ ಈಜಲು ಹೋಗಿ ಅವಘಡ ಸಂಭವಿಸಿದ್ದು, ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಜರುಗಿದೆ.
ಜಟ್ಟೆಪ್ಪ (19), ಕರಿಯಪ್ಪ (19) ಮೃತರು. ಇವರು ವಿಜಯಪುರ ಮೂಲದವರು ಎನ್ನಲಾಗಿದೆ. ಒಟ್ಟು ಆರು ಮಂದಿ ಕುರಿಗಾಯಿಗಳು ಕುರಿ ಮೇಯಿಸಲು ತೆರಳಿದ್ದರು. ಇದೇ ವೇಳೆ ಕಾಲುವೆಯಲ್ಲಿ ಈಜಲು ತೆರಳಿದ್ದಾರೆ. ಆರು ಮಂದಿ ಕುರಿಗಾಹಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದು, ನಾಲ್ವರು ಪಾರಾಗಿದ್ದಾರೆ. ನೀರುಪಾಲಾಗಿರುವ ಕುರಿಗಾಹಿಗಳಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾ ನಡೆಯುತ್ತಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



