ಬೀದರ್: ಕಲ್ಲಕ್ವಾರಿ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ 27ನೇ ವಾರ್ಡ್‌ನ ಫಾತ್ಮಾಪುರ್ ಗ್ರಾಮದಲ್ಲಿ ನಡೆದಿದೆ.
Advertisement
ಮೃತರನ್ನ ಮಹ್ಮದ್ ಖಾಜಾ ಇಸೂಫ್ (20), ಸೈಯದ್ ಸಮೀರ್ (20) ಸಾಕೀನ ಫಾತ್ಮಾಪುರ್ ಎಂದು ಗುರುತು ಪತ್ತೆಯಾಗಿದ್ದು,
ಶನಿವಾರ ಬೆಳಗಿನ ಜಾವ ಈಜಾಡಲು ಹೊಂಡದಲ್ಲಿ ಇಳಿದಿದ್ದ ಯುವಕರು ನೀರಪಾಲಾಗಿದ್ದಾರೆ.
ಈಜಲು ನೀರಿಗಿಳಿದ ಯುವಕರು ಮೇಲೆ ಬರದೆ ಇದ್ದಾಗ ಅಗ್ನ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ನಂತರ ಸಾರ್ವಜನಿಕರ ನೆರವಿನೊಂದಿಗೆ ಶವಗಳನ್ನು ಹೊರ ತೆಗೆಯಲಾಯಿತು. ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೂ ಸ್ಥಳದಲ್ಲಿ ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿದೆ.