HomeKarnataka Newsಕಾರವಾರ ಬಂದರಿಗೆ ಯುಎಇ ಹಡಗು: 3,100 ಟನ್ ಕಚ್ಚಾ ಡಾಂಬರ್ ಹೊತ್ತು ಬಂದ ‘ಚೆಂಗ್ ಎಕ್ಸ್’!

ಕಾರವಾರ ಬಂದರಿಗೆ ಯುಎಇ ಹಡಗು: 3,100 ಟನ್ ಕಚ್ಚಾ ಡಾಂಬರ್ ಹೊತ್ತು ಬಂದ ‘ಚೆಂಗ್ ಎಕ್ಸ್’!

For Dai;y Updates Join Our whatsapp Group

Spread the love

ಕಾರವಾರ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಸಮುದ್ರ ಮಾರ್ಗದ ವಾಣಿಜ್ಯ ಚಟುವಟಿಕೆಗಳು ಸಂಕಷ್ಟಕ್ಕೆ ಒಳಗಾಗಿರುವ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕಚ್ಚಾ ಡಾಂಬರ್ ಹೊತ್ತ ಹಡಗು ಕಾರವಾರದ ವಾಣಿಜ್ಯ ಬಂದರಿಗೆ ಆಗಮಿಸಿದೆ.

‘ಚೆಂಗ್ ಎಕ್ಸ್’ ಎನ್ನುವ ಸರಕು ಸಾಗಣೆ ಹಡಗು ಸುಮಾರು 3,100 ಟನ್ ಬಿಟುಮಿನ್ ಸಾಗಿಸಿ ಬಂದಿದ್ದು, ಸಾಮಾನ್ಯವಾಗಿ ಇದಕ್ಕೆ 5,500 ಟನ್ ಸಾಮರ್ಥ್ಯವಿದೆ. ಹಡಗು ಮಾರ್ಚ್ 3 ರಂದು ಯುಎಇಯಿಂದ ಹೊರಟಿದ್ದು, ಹಾರ್ಮುಜ್ ಜಲಸಂಧಿ ಪಕ್ಕದ ಮಾರ್ಗವನ್ನು ಹಾದು ಕಾರವಾರ ಬಂದರಿಗೆ ತಲುಪಿದೆ.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳಲ್ಲಿ ಭದ್ರತಾ ಕ್ರಮಗಳು ಹೆಚ್ಚಾಗಿದ್ದು, ಹಡಗು ಸಂಚಾರಕ್ಕೆ ಅನೇಕ ಅಡಚಣೆಗಳು ಎದುರಾಗಿವೆ. ಹಾರ್ಮುಜ್ ಜಲಸಂಧಿ ಭಾಗದಲ್ಲಿ ಇರಾನ್ ನಿರ್ಬಂಧಗಳು ಮತ್ತು ಉದ್ವಿಗ್ನ ಪರಿಸ್ಥಿತಿ ಕಾರಣವಾಗಿ ಹಡಗುಗಳ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದೆ. ಹಡಗು ಬಿಟುಮಿನ್ ಡಂಪ್ ಮಾಡಿದ ಬಳಿಕ ಮರಳಿ ಯುಎಇಗೆ ಹಿಂತಿರುಗುವ ವಿಚಾರದಲ್ಲಿ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲವೆಂದು ಹಡಗಿನ ಸಿಬ್ಬಂದಿ ಹೇಳಿದ್ದಾರೆ.

ಇದು ಮಧ್ಯಪ್ರಾಚ್ಯ ಯುದ್ಧದ ನಂತರ ಯುಎಇಯಿಂದ ಕಾರವಾರ ಬಂದರಿಗೆ ಆಗಮಿಸಿದ ಮೊದಲ ಹಡಗು ಆಗಿದ್ದು, ಬಂದರು ವಾಣಿಜ್ಯ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ನೀಡಿರುವಂತಾಗಿದೆ. ಕಳೆದ 12 ದಿನಗಳಿಂದ ಕಾರವಾರ ಬಂದರಿನಲ್ಲಿ ವಹಿವಾಟು ಸ್ಥಗಿತವಾಗಿದ್ದು, 80 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿತ್ತು. ಇತ್ತೀಚೆಗೆ ಯುಎಇ ಹಡಗು ಮತ್ತು ಗುಜರಾತ್‌ನಿಂದ ಬಂದ ಹಡಗಿನಿಂದ ವಾಣಿಜ್ಯ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬಂದಿದೆ, ಆದರೆ ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗದ ಪರಿಸ್ಥಿತಿ ಹೇಗಿರಲಿದೆ ಎಂಬುದು ಇನ್ನೂ ಅನಿಶ್ಚಿತವಾಗಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!