ಉಡುಪಿ: ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ್ ಬೋಲ್: ದೇಶ ವಿರೋಧಿ ಬರಹ

0
Spread the love

ಉಡುಪಿ: ಗಡಿಯಲ್ಲಿ ಅತ್ತ ಪಾಕ್​​ ಬಾಲ ಬಿಚ್ಚಿದ್ದಂತೆ ಇತ್ತ ಕರ್ನಾಟದಲ್ಲಿ ಕೆಲ ಪಾಕ್​​ ಪ್ರೇಮಿಗಳು ಕೂಡ ಬಾಲ ಬಿಚ್ಚಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್​ಗಳನ್ನು ಹರಿಬಿಡುತ್ತಿದ್ದರು. ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಮಹಾಲಿಂಗ ಅಡ್ಯಂತ್ಯಾಯ ಮೆಮೋರಿಯಲ್ ಇಂಜಿನಿಯರಿಂಗ್ ಕಾಲೇಜಿನ ಸರೋಜಿನಿ ಹಾಸ್ಟೆಲ್‌ನ ಗೋಡೆಯ ಮೇಲೆ ದೇಶವಿರೋಧಿ ಬರಹಗಳು ಕಾಣಿಸಿಕೊಂಡಿವೆ.

Advertisement

‘ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ್ ಬೋಲ್’ ‘ಮುಸ್ಲಿಂ ಜಿಂದಾಬಾದ್, ಹಿಂದೂ ಫಕ್ ಆಫ್” ಎಂಬ ಘೋಷಣೆಗಳನ್ನು ಗೋಡೆಯ ಮೇಲೆ ಬರೆಯಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬರಹವನ್ನು ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬರೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯನ್ನು ಗುರುತಿಸಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಘಟನೆಯಿಂದ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಈ ಕೃತ್ಯವನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here