ಲಕ್ಕುಂಡಿ: ಲಕ್ಕುಂಡಿಯ ಮಾರುತಿ ದೇವಸ್ಥಾನದಲ್ಲಿ ಯುಗಾದಿ ಅಂಗವಾಗಿ ಬಣ್ಣದ ಹೊಂಡವನ್ನು ತುಳುಕಿಸಿ ಹಬ್ಬವನ್ನು ಸಂಭ್ರಮಿಸಿದರು. ದೇವಸ್ಥಾನದ ಮುಂದೆ 10 ಅಡಿ ಆಳದ ಬಣ್ಣದ ಹೊಂಡದಲ್ಲಿ ಯುವಕರು, ಮಕ್ಕಳು ಜಿಗಿದಾಡಿ ಸಂಭ್ರಮಿಸಿದರು. ಇದಕ್ಕೂ ಪೂರ್ವ ದೇವಸ್ಥಾನದ ಅರ್ಚಕರು ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಐದು ಸುತ್ತು ಪ್ರದಕ್ಷಣೆ ಹಾಕಿ ಹೊಂಡವನ್ನು ಪ್ರವೇಶ ಮಾಡಿದ ನಂತರ ಗ್ರಾಮದ ಯುವಕರು ಪ್ರವೇಶಿಸಿದರು. ಬೆಳಿಗ್ಗೆ ಮಾರುತಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Advertisement