ಯುಗಾದಿ ಕವನ

0
Spread the love

ಬಂತೋ ಬಂತೋ ಯುಗಾದಿ ಬಂತೋ

Advertisement

ತಂತೋ ತಂತೋ ಸಡಗರ ತಂತೋ

ಸಿರಿ ತಂದಿತಪ್ಪ ಈ ಯುಗಾದಿ ಹಬ್ಬ

ಸಂತಸದ ರೂಪ ಈ ಯುಗಾದಿ ಹಬ್ಬ

ಮನೆಯ ಅಂಗಳದಿ ಬಣ್ಣದ ರಂಗೋಲಿ

ಮನೆಯ ಬಾಗಿಲು ಮಾವಿನ ತೋರಣ

ಊರ ತುಂಬೆಲ್ಲಾ ಹೊಸತು ನೋಡಾ

ನಾಡಿನ ಜನರ ಹಿಗ್ಗು ನೋಡಾ

ಹಬ್ಬದ ಸಿರಿಗೆ ತುಪ್ಪದ ಘಮ ಘಮ

ಹಸಿರಿನ ಗರಿಗೆ ಸಂಭ್ರಮದ ಸಮ ಸಮ

ಹರಿಯುವ ನೀರಲ್ಲಿ ತಲೆ ಎಣ್ಣೆ ಸ್ನಾನ

ನಾರಿಯರ ಮುಡಿ ತುಂಬ ಮಲ್ಲಿಗೆ

ನಾಡ ತುಂಬಾ ಸಂತಸ

ಎಲ್ಲೆಲ್ಲೂ ಹಬ್ಬದ ಸಡಗರ

ಸಿಹಿಯಾಗಿರೋ ಮನಸ್ಸಿಗೆ ಬೇವು ಬೆರಸಿ

ಹೋಳಿಗೆ ತಿಂದು ಬಾಳಿಗೆ ಸಿಹಿ ಬೆರೆಸಿ.

– ವಿ.ಎಂ.ಎಸ್ ಗೋಪಿ.

ಸಾಹಿತಿಗಳು, ಬೆಂಗಳೂರು.


Spread the love

LEAVE A REPLY

Please enter your comment!
Please enter your name here