ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಭೀತಿ ಇದೀಗ ಗ್ಯಾಸ್ ಸಿಲಿಂಡರ್‌ಗಳ ಬಳಿಕ ಅಡುಗೆ ಎಣ್ಣೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಮುನ್ನವೇ ಅಡುಗೆ ಎಣ್ಣೆಯ ದರ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಯುದ್ಧದ ಪರಿಣಾಮವಾಗಿ ಅಡುಗೆ ಎಣ್ಣೆಯ ರಫ್ತು ಹಾಗೂ ಸರಬರಾಜು ವ್ಯತ್ಯಯಗೊಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ 100–200 ಬಾಕ್ಸ್‌ಗಳು ಪೂರೈಕೆಯಾಗುತ್ತಿದ್ದರೆ, ಇದೀಗ ಕೇವಲ 10 ಶೇಕಡಾ ಮಟ್ಟಕ್ಕೆ ಮಾತ್ರ ಸರಕು ಬರುತ್ತಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಅಡುಗೆ ಎಣ್ಣೆ ಅಂಗಡಿ ಮಾಲೀಕ ಅಜಯ್ ಮಾತನಾಡಿ, ಬ್ರಾಂಡೆಡ್ ಎಣ್ಣೆಯ ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಪ್ರತಿ ಲೀಟರ್ ಎಣ್ಣೆಯ ಬೆಲೆಯಲ್ಲಿ ಸುಮಾರು 20 ರೂಪಾಯಿ ಹೆಚ್ಚಳವಾಗಿದೆ ಎಂದು ಹೇಳಿದರು.
ಸರಕು ಕೊರತೆಯಿಂದ ವ್ಯಾಪಾರಕ್ಕೂ ಹಿನ್ನಡೆಯಾಗಿದ್ದು, ಗ್ರಾಹಕರು ಬ್ರಾಂಡೆಡ್ ಉತ್ಪನ್ನಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಪೂರೈಕೆ ಸಮಸ್ಯೆ ಮುಂದುವರಿದರೆ ಹಬ್ಬದ ಸಿದ್ಧತೆಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.



