ಯುಗಾದಿ, ರಂಜಾನ್ ಪುಣ್ಯದ ಪ್ರತಿಫಲ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಯುಗಾದಿ ಹಾಗೂ ರಂಜಾನ್ ಹಬ್ಬಗಳು ಏಕ ಕಾಲದಲ್ಲಿ ಬಂದಿರುವುದು ಮಾನವ ಜನ್ಮದ ಪುಣ್ಯದ ಪ್ರತಿಫಲವಾಗಿದೆ ಎಂದು ಮೌಲಾನ ಮಲೀಕ್ ಹೇಳಿದರು.

Advertisement

ಅವರು ಸೋಮವಾರ ಮಾರನಬಸರಿ ಗ್ರಾಮದಲ್ಲಿ ಜರುಗಿದ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.

ನಮ್ಮದು ಹಲವು ಧರ್ಮಗಳ, ಹಲವು ಭಾಷೆಗಳ ಇತಿಹಾಸವನ್ನು ಹೊಂದಿರುವ ಸುಂದರ ಹಾಗೂ ಸಹೋದರತೆಯ ದೇಶವಾಗಿದೆ. ಎಲ್ಲ ಹಬ್ಬಗಳನ್ನು ಎಲ್ಲರೂ ಸೇರಿಕೊಂಡು ಆಚರಿಸಿದಾಗ ನೀಜವಾದ ಅರ್ಥ ಬರುತ್ತದೆ ಎಂದರು.

ತಿಂಗಳ ಕಾಲ ಉಪವಾಸವನ್ನು ನೆರವೇರಿಸಿ ಧರ್ಮದ ಹಾದಿಯಲ್ಲಿ ಸಾಗಿರುವ ಮುಸ್ಲಿಂ ಬಂಧುಗಳು ಬಡವರ ಬಗ್ಗೆ ಕಾಳಜಿಯನ್ನು ವಹಿಸಬೇಕು. ಸರ್ವ ಧರ್ಮದ ಸಮಾಜದ ಬಂಧುಗಳು ಸಹೋದರೆತಯನ್ನು ಬೆಳೆಸಿಕೊಳ್ಳಬೇಕು. ಇಸ್ಲಾಂ ಧರ್ಮ ಶಾಂತಿಯನ್ನು ಪ್ರತಿಪಾದಿಸುವ ಧರ್ಮವಾಗಿದ್ದು, ಇದನ್ನು ಸಮಾಜದ ಬಂಧುಗಳು ಅರ್ಥ ಮಾಡಿಕೊಳ್ಳಬೇಕು. ಧರ್ಮದ ಜೊತೆಗೆ ಮಕ್ಕಳ ಅಕ್ಷರ ಜ್ಞಾನಕ್ಕೆ ಹೆಚ್ಚಿನ ಮಹತ್ವ ನಿಡಬೇಕು ಎಂದರು.

ರೋಣ, ಹೊಸಳ್ಳಿ, ನಿಡಗುಂದಿ, ಕಳಕಾಪೂರ, ಇಟಗಿ, ಹಿರೇಹಾಳ, ಕೊತಬಾಳ, ಸವಡಿ, ಅಬ್ಬಿಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮುಸ್ಲಿಂ ಬಂಧುಗಳು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕಾಶೀಮಸಾಬ ದೋಟಿಹಾಳ, ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಎಚ್. ಹಾದಿಮನಿ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ರೈಮಾನಸಾಬ ಮೋತೆಖಾನ್, ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ, ನಬಿಸಾಬ ಹುಡೇದ, ಖಾದಿರಸಾಬ ಕಳಕಾಪೂರ, ಸಂಗಪ್ಪ ಮೆಣಸಿನಕಾಯಿ, ಮಲ್ಲು ಮಾದರ, ಶಿವು ಜುಮ್ಮನಗೌಡರ, ಇಸ್ಮಾಹಿಲ್ ಹೊರಪೇಟಿ, ಪಕ್ಕಿರಪ್ಪ ಕುಕನೂರ, ಚಂದ್ರು ಮಾರನಬಸರಿ, ಶ್ರೀಕಾಂತ ಕುಲಕರ್ಣಿ, ರಿಯಾಜ ಆಲೂರ, ಡಿ.ಡಿ. ದೋಟಿಹಾಳ, ಅಲ್ಲಾಸಾಬ ಮೋತೆಖಾನ್, ಮಹ್ಮದ ಸವಡಿ, ಪಕ್ರುಸಾಬ ಹಜರತನವರ, ಮೌಲಾಸಾಬ ಸವಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here