ಮಂಗಳೂರು: ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ದೇರಳಕಟ್ಟೆ ಸಮೀಪದ ಕಾನಕೆರೆ ಹಾಗೂ ಮೊಂಟೆಪದವು ಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಆರು ಜನರಿದ್ದ ಕುಟುಂಬದಲ್ಲಿ ಇಬ್ಬರು ಮೊಮ್ಮಕ್ಕಳು ಸೇರಿ ಅಜ್ಜಿ ಮೃತಪಟ್ಟಿರುವ ಘಟನೆ ನಡೆದಿದೆ. ಆರ್ಯನ್ (10), ಪ್ರೇಮ ಪೂಜಾರಿ (60), ಆರುಷ್ (1) ಮೃತ ದುರ್ಧೈವಿಗಳಾಗಿದ್ದಾರೆ.
ಇನ್ನೂ ತನ್ನ ಮಕ್ಕಳನ್ನು ತೋಳಲ್ಲಿ ಅಪ್ಪಿಕೊಂಡು ಹೋರಾಡಿದ ತಾಯಿಯನ್ನ ರಕ್ಷಣೆ ಮಾಡಲಾಗಿದೆ. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಮಗು ಪ್ರಜ್ಞಾನಹೀನ ಸ್ಥಿತಿಯಲ್ಲಿತ್ತು, ಪ್ರಜ್ಞೆ ಬರುತ್ತಿದ್ದಂತೆ ತನ್ನ ತಾಯಿಯ ತೋಳನ್ನು ಬಿಗಿದಪ್ಪಿಕೊಂಡು ಕಾಪಾಡಿ.. ಕಾಪಾಡಿ.. ಎನ್ನುತ್ತಾ ಚೀರತೊಡಗಿತ್ತು.
ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ತಂಡಗಳು ತಾಯಿ ಅಶ್ವಿನಿ, ಮಗು ಆರುಷ್ ಇಬ್ಬರನ್ನೂ ರಕ್ಷಣೆ ಮಾಡಿದ್ದವು. ಆದ್ರೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿದೆ.