ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಿದ ಉಚಿತ ಬಸ್ ಸೇವೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಮುಂರುವ ಪರೀಕ್ಷೆಗೆ ಹಾಜರಾಗದೆ ಹೋದಲ್ಲಿ ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಬನಾಡಿದ ಅವರು, ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ 90 ಕೋಟಿ ರೂ ಅನುದಾನ ನೀಡಿದೆ. ಆದರೆ ಗದಗ ಜಿಲ್ಲೆಯಿಂದ ಸರಕಾರಕ್ಕೆ 400-500 ಕೋಟಿ ರೂ ತೆರಿಗೆ ಹಣ ಸಂಗ್ರಹವಾಗುತ್ತದೆ. ಈ ಬಜೆಟ್‌ನಲ್ಲಿ ಘೋಷಣೆ ಆಗಿದ್ದು ಕೇವಲ 20 ಕೋಟಿ ರೂ. ಅದಕ್ಕಾಗಿ ನಮ್ಮ ಜಿಲ್ಲೆಯಿಂದ `ನಮ್ಮ ತೆರಿಗೆ-ನಮ್ಮ ಹಕ್ಕು’ ಎಂದು ಫೆ.೨೭ರಂದು ಬೆಳಿಗ್ಗೆ 10.30ಕ್ಕೆ ಉಲ್ಟಾ ಪಾದಯಾತ್ರೆಯನ್ನ ನಗರದ ಗಾಂಧಿ ವೃತ್ತದಿಂದ ತಹಸೀಲ್ದಾರ ಕಛೇರಿವರೆಗೆ ನಡೆಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಸರಕಾರ ನೀರಿಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲವಾದ್ದರಿಂದ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದೆ ಎಂದು ವೆಂಕನಗೌಡ ಗೋವಿಂದಗೌಡ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ದೇವಪ್ಪ ಮಲ್ಲಸಮುದ್ರ, ಪ್ರಪುಲ್ ಪುಣೇಕರ್, ಎಂ.ಎಸ್. ಪರ್ವತಗೌಡ ಸೇರಿದಂತೆ ಮುಂತಾದವರಿದ್ದರು.